ಅಭ್ಯರ್ಥಿ ಮನೆಯಲ್ಲಿ 11 ಕೋಟಿ ರೂಪಾಯಿ ಪತ್ತೆ ಪ್ರಕರಣ! ರದ್ದಾಗುತ್ತಾ ವೆಲ್ಲೂರು ಚುನಾವಣೆ?!

ದೇಶದಾದ್ಯಂತ ಮತದಾನಕ್ಕೆ ದಿನಗಣನೆ ನಡೆದಿರುವ ಬೆನ್ನಲ್ಲೇ,  ತಮಿಳುನಾಡಿನ ವೆಲ್ಲೂರಿನಲ್ಲಿ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ ಇದೆ. ವೆಲ್ಲೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮನೆಯಲ್ಲಿ 11 ಕೋಟಿಗೂ ಅಧಿಕ ಮೊತ್ತದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ  ತಮಿಳುನಾಡು ಚುನಾವಣಾ ಆಯೋಗ  ಮತದಾನ ರದ್ದುಗೊಳಿಸುವ ಸಾಧ್ಯತೆ ಇದೆ.

ad

 

ಡಿಎಂಕೆ ಹಿರಿಯ ನಾಯಕ ದುರೈ ಮುರುಗನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ ಚೀಲದಲ್ಲಿ ತುಂಬಿಟ್ಟ ಕಂತೆ ಕಂತೆ ಹಣ ಪತ್ತೆಯಾಗಿತ್ತು. ದುರೈ ಮುರುಗನ್ ಸೇರಿದ ಸಿಮೆಂಟ್ ಗೋಡೌನ್​ನಲ್ಲಿ 11.5 ಕೋಟಿ ರೂಪಾಯಿ ಪತ್ತೆಯಾಗಿದೆ. ದುರೈ ಮರುಗನ್ ಪುತ್ರ ಆನಂದ ವೆಲ್ಲೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿದ್ದಾನೆ.  ಅಭ್ಯರ್ಥಿ ತಂದೆಯ ಮನೆಯಲ್ಲಿ ಈ ಹಣ ಪತ್ತೆಯಾಗಿರೋದರಿಂದ ಚುನಾವಣಾ ಅಕ್ರಮಗಳ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ದಾಳಿ ನಡೆಸಿ  11 ಕೋಟಿ ರೂ ಮಾಡಿದ ಅಧಿಕಾರಿಗಳು ವರದಿ ನೀಡಿದ್ದು, ಈ ವರದಿ ಆಧಾರದಲ್ಲಿ ಆ ಜಿಲ್ಲೆಯ ಪೊಲೀಸರು ಆರೋಪಿ ಕದಿರ್ ಆನಂದ್ ಹಾಗೂ ಡಿಎಂಕೆ ಇಬ್ಬರು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ  ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ರದ್ದು ಮಾಡಬೇಕು ಎಂಬ ಶಿಫಾರಸ್ಸನ್ನು  ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ.