ನಿರ್ದೇಶಕ ಎಸ್. ನಾರಾಯಣ್ ಅವರಿಗೆ 90 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. 300 ಕೋಟಿ ರೂ. ಸಾಲ ಕೊಡಿಸೋದಾಗಿ ಸತ್ಯನಾರಾಯಣ ಎಂಬುವವರು 90 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಈ ಸಂಬಂಧ ಸತ್ಯನಾರಾಯಣ ವಿರುದ್ದ 22ನೇ ಎಸಿಎಂಎಂ ಕೋರ್ಟ್​ನಲ್ಲಿ ಖಾಸಗಿ ದೂರು ದಾಖಲಾಗಿದೆ. ಎಸ್​.ನಾರಾಯಣ್ ಪರ ವಕೀಲ ಶಂಕರಪ್ಪ ವಾದ ಮಂಡಿಸುತ್ತಿದ್ದಾರೆ. ಇನ್ನು ಈ ಖಾಸಗಿ ದೂರು ಅಂಗೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಜೂನ್​​ 5ಕ್ಕೆ ಮುಂದೂಡಿದೆ. ಇನ್ನು, ಸಮಸ್ಯೆ ಬಗೆ ಹರಿಸಿಕೊಳ್ಳೋಣ ಎಂದು 50 ಲಕ್ಷ ರೂಪಾಯಿ ಚೆಕ್ ನೀಡಿದ್ರು. ಆದ್ರೆ, ಆ ಚೆಕ್ ಕೂಡಾ ಬೌನ್ಸ್ ಆಗಿದ್ದು, ಖಾಸಗಿ ದೂರು ದಾಖಲಾಗಿದೆ.
====
ಪುನೀತ್ ರಾಜ್​ಕುಮಾರ್ ಹೆಸರು ಹೇಳಿಕೊಂಡು ಎಸ್​. ನಾರಾಯಣ್ ಬಳಿ ಬಂದಿದ್ದ ರಮೇಶ್​ ಎನ್ನುವವರಿಂದ ಸತ್ಯನಾರಾಯಣ ಮತ್ತು ಹರೀಶ್ ಕುಲಕರ್ಣಿ ಎಂಬುವವರ ಪರಿಚಯವಾಗಿದೆ. ಬಳಿಕ ಬ್ಯುಸಿನೆಸ್​ಗೆ 300 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಎಸ್​. ನಾರಾಯಣ್​ಗೆ ನಾಮ ಹಾಕಿದ್ದಾರೆ. ಲೋನ್​ಗೆ ಸರ್ವೀಸ್ ಚಾರ್ಜ್ ಕೊಡಬೇಕು ಅಂತಾ 90 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ವಂಚಿಸಿದ್ದ ಸತ್ಯನಾರಾಯಣ ಎಂಬುವವನನ್ನ ಬಂಧಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here