ಸಂಸತ್ನಲ್ಲಿ ಮಾತನಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಂಸದ ಸಚಿನ್ ತೆಂಡೂಲ್ಕರ್ FB ಮೊರೆ ಹೋಗಿದ್ದಾರೆ. ಆರೋಗ್ಯಕರ, ಸದೃಢ ಭಾರತ ನನ್ನ ಕನಸು ಎಂದು ಹೇಳಿಕೊಂಡಿರುವ ತೆಂಡೂಲ್ಕರ್, ಪಠ್ಯದಷ್ಟೇ ಕ್ರೀಡೆಗೂ ಮಹತ್ವ ನೀಡಬೇಕಿದೆ ಎಂದಿದ್ದಾರೆ.
ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಾಣ ಮಾಡಬೇಕಿದ್ದು, ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಫೇಸ್ಬುಕ್ ಲೈವ್ನಲ್ಲಿ ಹೇಳಿಕೊಂಡಿದ್ದಾರೆ.
https://www.facebook.com/SachinTendulkar/videos/1753046098052915/
ಭಾರತ ಕ್ರೀಡೆಯನ್ನು ಪ್ರೀತಿಸುವ ದೇಶದಿಂದ, ಕ್ರೀಡೆಯನ್ನು ಆಡುವ ದೇಶವಾಗಬೇಕಿದೆ ಎಂದು ಯುವಜನತೆಗೆ ಕರೆ ನೀಡಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್, ಕಾಂಗ್ರೆಸ್ನ ಪ್ರತಿಭಟನೆಯಿಂದಾಗಿ ಸಂಸತ್ನಲ್ಲಿ ಮಾತನಾಡುವ ಅವಕಾಶ ಕಳೆದುಕೊಂಡಿದ್ದರು.