ಮುಜೇ ಲಡಖಿ ಮಿಲ್​ ಗಯಿ- ಬಾಲಿವುಡ್​ ನಲ್ಲಿ ಸಂಚಲನ ಮೂಡಿಸಿದ ಸಲ್ಮಾನ್ ​ ಖಾನ್ ಟ್ವಿಟ್​​​

ಸ್ಯಾಂಡಲ್​ವುಡ್​​ನಲ್ಲಿ ಕಳೆದ ಎರಡು ವರ್ಷಗಳಿಂದ ಮದುವೆಗಳದ್ದೇ ಸುದ್ದಿ. ಈಗಾಗಲೇ ಹಲವು ನಟ-ನಟಿಯರು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ.

ಇದೀಗ ಈ ಸಾಲಿಗೆ ಬಾಲಿವುಡ್ ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಹಾಗೂ ​ ಬ್ಯಾಡ್ ಬಾಯ್ ಖ್ಯಾತಿಯ ಸಲ್ಲುಮಿಯಾ ಕೂಡ ತಮ್ಮ ಬ್ಯಾಚುಲರ್​ ಜೀವನಕ್ಕೆ ಗುಡ್​ ಬೈ ಹೇಳಿ ಗೃಹಸ್ಥಾಶ್ರಮಕ್ಕೆ ಕಾಲಿರಿಸುವ ಮುನ್ಸೂಚನೆ ದೊರೆತಿದೆ. ಹೌದು ಈ ಬಗ್ಗೆ ಸ್ವತಃ ಸಲ್ಮಾನ್​ ಖಾನ್​ ಖಚಿತ ಪಡಿಸಿದ್ದು, ತಮ್ಮ ಟ್ವಿಟ್​​​ರ್ ಅಕೌಂಟ್​​ನಲ್ಲಿ ಮುಜೇ ಲಡಕಿ ಮಿಲ್​ ಗಯಿ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್​ ತನಗೆ ಹುಡುಗಿ ಸಿಕ್ಕಿದ್ದಾಳೆ ಎಂದು ಟ್ವಿಟ್​​​ ಮಾಡುತ್ತಿದ್ದಂತೆ ಸಲ್ಲು ಅಭಿಮಾನಿಗಳು ರೀಟ್ವಿಟ್​ ಮಾಡಿದ್ದು, ಕೆಲವರು ಸಿಕ್ಕಿರೋದು ಹುಡುಗಿಯಲ್ಲ ಆಂಟಿ ಎಂದು ಕೂಡ ವ್ಯಂಗ್ಯವಾಡಿದ್ದಾರೆ.

ಈಗಾಗಲೇ 52 ವರ್ಷದ ಹೊಸ್ತಿಲಲ್ಲಿರುವ ಸಲ್ಮಾನ್ ಖಾನ್​, ಮದ್ವೆ ಬಗ್ಗೆನೇ ಬಾಲಿವುಡ್​ನಲ್ಲಿ ಈಗಾಗಲೇ ದೊಡ್ಡ ಗಾಸಿಪ್, ಸುದ್ದಿ ಕತೆಗಳಿವೆ. ಹೀಗಿರುವಾಗಲೇ ಧೀಡಿರ ಸಲ್ಲುಮಿಯಾ ಹುಡುಗಿ ಸಿಕ್ಕಿದ್ದಾಳೆ ಎಂದಿರೋದು ಬಾಲಿವುಡ್​ ಗಲ್ಲಿಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇನ್ನು ಸಲ್ಮಾನ್​ ಖಾನ್​ ಈ ಟ್ವಿಟ್​​​ ನಿಜವಾದ ಅರ್ಥ ಯಾರಿಗೂ ಇನ್ನು ಸ್ಪಷ್ಟವಾಗಿಲ್ಲ. ಯಾಕಂದ್ರೆ ಸಲ್ಮಾನ್ ಖಾನ್ ಬಹುನೀರಿಕ್ಷಿತ ಚಿತ್ರ ಭಾರತ ಚಿತ್ರೀಕರಣ ಕೂಡ ಆರಂಭವಾಗುತ್ತಿದ್ದೆ. ಹೀಗಾಗಿ ಸಲ್ಮಾನ್​ ಖಾನ್​ ತಮ್ಮ ಮುಂದಿನ ಚಿತ್ರಕ್ಕೆ ಹಿರೋಯಿನ್​ ಸಿಕ್ಕಿದ್ದಾಳೆ ಎಂಬ ಅರ್ಥದಲ್ಲಿ ಕೂಡ ಟ್ವಿಟ್​ ಮಾಡಿರುವ ಸಾಧ್ಯತೆ ಕೂಡ ಇದೆ. ಮುಂದಿನ ದಿನಗಳಲ್ಲಿ ಸಲ್ಮಾನ್​ ಖಾನ್​ಗೆ ಸಿಕ್ಕಿದ ಹುಡುಗಿ ಯಾರು ಅನ್ನೋದು ಸ್ಪಷ್ಟವಾಗಬೇಕಿದೆ.