ಜೀವಂತ ತಾಯಿಗೆ ಸಮಾಧಿ ಸಿದ್ದಗೊಳಿಸಿದ ಮಕ್ಕಳು !! ಬಾಗಲಕೋಟೆಯಲ್ಲೊಂದು ವಿಲಕ್ಷಣ ಪ್ರಕರಣ !!

ಜೀವಂತ ತಾಯಿಗೆ ಸಮಾಧಿ ಸಿದ್ದಗೊಳಿಸಿದ ಮಕ್ಕಳು !! ಬಾಗಲಕೋಟೆಯಲ್ಲೊಂದು ವಿಲಕ್ಷಣ ಪ್ರಕರಣ !!
—–

ತಾಯಿಯನ್ನು ಉಳಿಸಿಕೊಳ್ಳಲು ತಮ್ಮ ಬದುಕನ್ನು ಪಣವಿಡೋ ಮಕ್ಕಳನ್ನು ನೋಡಿದ್ದೇವೆ. ಆದರೆ ಬಾಗಲಕೋಟೆಯಲ್ಲಿ ಜೀವಂತ ತಾಯಯಿ ಮರಣಾನಂತರದ ಸಮಾಧಿಗಾಗಿ ಜಾಗ ಗುರುತಿಸಿರೋ ಮಕ್ಕಳು ಪೂಜಾಧಿ ಕಾರ್ಯಗಳನ್ನು ನೆರವೇರಿಸಿದ್ದಾರೆ.

ಬಾಗಲಕೋಟೆಯ ಹಣಗುಂದದ ಪಾರ್ವತಮ್ಮಗೆ ಈ ರೀತಿ ಮಕ್ಕಳು ಸಮಾಧಿ ಸಿದ್ದಗೊಳಿಸಿದ್ದಾರೆ. ಶತಾಯುಷಿ ಪಾರ್ವತಮ್ಮ ಕೂಡಾ ವಿಚಿತ್ರ ವರ್ತನೆಯಿಂದ ಗಮನ ಸೆಳೆದಿದ್ದಾರೆ.

ನಾವು ಒಂದೆರೆಡು ದಿನ ಅನ್ನ ನೀರು ಬಿಟ್ರೆ ಬದುಕೋದು ಕಷ್ಟ. ಅಂಥಾದ್ರಲ್ಲಿ ಈ ಶತಾಯುಷಿ ಅಜ್ಜಿ ಪಾರ್ವತಮ್ಮ 41 ದಿನಗಳಿಂದ ನೀರು, ಆಹಾರ ತ್ಯಜಿಸಿ ಜೀವ ಕೈಯಲ್ಲಿ ಹಿಡಕೊಂಡು ಮಲಗಿ ಬಿಟ್ಟಿದ್ದಾಳೆ. ಅಷ್ಟೆ ಅಲ್ಲ ವೃದ್ಧೆಯ ಸಾವಿಗೂ ಮುನ್ನವೇ ಆಕೆಯ ಮಕ್ಕಳು ತಮ್ಮ ಜಮೀನಿನಲ್ಲಿ ಸಮಾಧಿಗೆ ಜಾಗೆ ಗುರ್ತಿಸಿ ಪೂಜೆ ಮಾಡಿದ್ದಾರೆ.

ಅಂದ್ಹಾಗೆ ಇಂಥದೊಂದು ವಿಚಿತ್ರ ಘಟನೆ ನಡೆದಿರೋದು ಬಾಗಲಕೋಟೆಯ ಹನುಗುಂದ ತಾಲೂಕಿನ ಉಪನಾಳದಲ್ಲಿ.

106 ವರ್ಷದ ಪಾರ್ವತೆಮ್ಮ ಹಿರೇಮಠ ಇದೀಗ ಎಲ್ಲರ ಗಮನ ಸೆಳೆದಿರುವ ಅಜ್ಜಿ. ವಯೋಸಹಜವಾಗಿ ಅಶಕ್ತವಾಗಿದ್ದು, ಈಕೆಗೆ ಯಾವುದೇ ಖಾಯಿಲೆ ಕೂಡ ಇಲ್ಲ ಎಂದು ವೈದ್ಯರು ಧೃಡ ಪಡಿಸಿದ್ದಾರಂತೆ. ಇದೂ ಕೂಡ ಅಚ್ಚರಿಗೆ ಕಾರಣವಾಗಿದೆ. 41 ದಿನಗಳ ಕಾಲ ಅನ್ನ ನೀರು ಬಿಟ್ಟಿರುವ ಅಜ್ಜಿಗೆ
ಸಾಯುವ ಮುನ್ನವೇ ಸಮಾಧಿ ಜಾಗ ಗುರುತಿಸಿರೋದು ಅವಲಕ್ಷಣ ಎನಿಸಿದೆ.