ಕೆಜಿಎಫ್​-2 ಶೂಟಿಂಗ್​ ವೇಳೆ ಯಶ್​ಗೆ ಸಿಕ್ತು ಭರ್ಜರಿ ಗಿಫ್ಟ್​​! ರಾಕಿಂಗ್​ ಸ್ಟಾರ್​ ಮನಸ್ಸುಗೆದ್ದ ಉಡುಗೊರೆ ಏನುಗೊತ್ತಾ?!

ಕೆಜಿಎಫ್​ ರಾಕಿಂಗ್ ಸ್ಟಾರ್ ಬದುಕಿನಲ್ಲಿ ಮರೆಯಲಾಗದ ಸಿನಿಮಾ. ರಾಕಿಂಗ್ ಸ್ಟಾರ್​ ಯಶ್​ರನ್ನು ವಿಶ್ವದ ಚಿತ್ರೋದ್ಯಮಕ್ಕೆ ಪರಿಚಯಿಸಿದ ಖ್ಯಾತಿ ಕೆಜಿಎಫ್​ಗಿದೆ. ಇದೀಗ ಈ ಚಿತ್ರದ ನೆನಪನ್ನು ಯಶ್​​ಗೆ ಇನ್ನಷ್ಟು ಹಸಿರಾಗಿಸಲು ಅಭಿಮಾನಿಯೊಬ್ಬ ಸುಂದರವಾದ ಗಿಫ್ಟ್​ ನೀಡಿದ್ದಾರೆ. ಏನದು ಇಲ್ಲಿದೆ ಡಿಟೇಲ್ಸ್​!

ad

ಕೆಜಿಎಫ್​ ಚಿತ್ರ ಹಿಟ್​ ಆಗುತ್ತಿದ್ದಂತೆ ಕೆಜಿಎಫ್​ ಕಾಸ್ಟ್ಯೂಮ್​, ಯಶ್​ ಲುಕ್, ಯಶ್ ಹೇರಸ್ಟೈಲ್​ ಎಲ್ಲವೂ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಯಶ್​ ಕೆಜಿಎಫ್​ ಲುಕ್​ ಅಭಿಮಾನಿಗಳ ಅತಿಯಾದ ಅಭಿಮಾನಕ್ಕೆ ಪಾತ್ರವಾಗಿದ್ದು, ಸುಳ್ಳಲ್ಲ. ಇದೀಗ ಯಶ್ ಅಭಿಮಾನಿಯೊಬ್ಬ  ಇದೇ ಕೆಜಿಎಫ್​ ಲುಕ್​ನ್ನು ಮರದ ಹಲಗೆಗಳ ಮೇಲೆ ಕೆತ್ತಿ ಯಶ್​ಗೆ ಕೊಡುಗೆಯಾಗಿ ನೀಡಿದ್ದಾರೆ.

ಮೈಸೂರಿನಲ್ಲಿ  ನಡೆಯುತ್ತಿರುವ ಕೆಜಿಎಫ್ ಚಾಪ್ಟರ್​​-2 ಚಿತ್ರದ ಶೂಟಿಂಗ್ ಸ್ಥಳಕ್ಕೆ ಹೋಗಿ ಸ್ವತಃ ಯಶ್​ರನ್ನು ಭೇಟಿ ಮಾಡಿದ ಅಭಿಮಾನಿ  ಯಶ್ ಎಂದಿಗೂ ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾರೆ. ಇದನ್ನು ನೋಡಿದ ಯಶ್ ಫುಲ್ ಖುಷ್ ಆಗಿದ್ದು, ಅಭಿಮಾನಿಯ ಪ್ರತಿಭೆಗೆ ಪುಲ್ ಫಿದಾ ಆಗಿದ್ದಾರೆ.

ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಪಟ್ಟ ಅಲಂಕರಿಸಿದ ರಾಕಿಂಗ್ ಸ್ಟಾರ್ ಗೆ ಕರ್ನಾಟಕ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಗಣಿನಾಡಲ್ಲಿ ತಲೆಗೆ ಪೇಟಾ ಸುತ್ತಿಕೊಂಡು, ಗಡ್ಡ ಬಿಟ್ಟು ಮಾಸ್​ ಹಾಗೂ ರಗಡ್ ಲುಕ್ ನಲ್ಲಿ ಎಂಟ್ರಿಕೊಟ್ಟಿದ್ದರು. ಅದರಲ್ಲೂ ಚಿತ್ರದಲ್ಲಿ ಗಡಿನಾಡಿನಲ್ಲಿ ಯಶ್ ಕೊಟ್ಟ ಎಂಟ್ರಿಗೆ ಪ್ರೇಕ್ಷಕ ಕ್ಲೀನ್ ಬೋಲ್ಡ್ ಆಗಿದ್ದ. ಜೊತೆಗೆ ಯಶ್ ಕೊಟ್ಟ ಲುಕ್ ಸಿಕ್ಕಾಪಟ್ಟೇ ಕ್ರೇಜ್ ಕ್ರಿಯೇಟ್ ಮಾಡಿತ್ತು.