ಕೆಸಿಸಿ ಕಪ್​ ಪಂದ್ಯಾವಳಿ ಶಿವಣ್ಣ-ಸುದೀಪ್ ಕ್ರಿಕೇಟ್ ಪ್ರ್ಯಾಕ್ಟಿಸ್​

Sandalwood Actors Sudeep and Shivarajkumar Cricket Practice
Sandalwood Actors Sudeep and Shivarajkumar Cricket Practice

ಸ್ಯಾಂಡಲ್​ವುಡ್​​​ನ ಹೆಬ್ಬುಲಿ ಕಿಚ್ಚ ಸುದೀಪ್​​​ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲಿಗೆ ಸಾಕ್ಷಿ ಆಗ್ತಿದ್ದಾರೆ. ಸುದೀಪ್​ ಕ್ರಿಕೆಟ್​​ನಲ್ಲಿ ಇದುವರೆಗೂ ಯಾವ ಇಂಡಸ್ಟ್ರಿಯೂ ಮಾಡದ ವಿಭಿನ್ನ ಪ್ರಯತ್ನವೊಂದನ್ನ ಚಂದನವನದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೇಟ್ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ .

ಈ ಪಂದ್ಯಾವಳಿಗೆ ಕೆಸಿಸಿಯ 6 ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಇಂದು ಬೆಂಗಳೂರಿನ ಜಿ ಟಿ ರೆಸಿಡೆಂಸಿ ಬಳಿ ಕ್ರಿಕೇಟ್ ಪ್ರ್ಯಾಕ್ಟೀಸ್ ನಡೆಯಿತು. ಇನ್ನು ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡಲು ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಭಾಗಿಯಾಗಿದ್ರು.ಇನ್ನೂ ಸಿನಿರಂಗದವರಿಗಾಗಿ ನಡೆಯುವ ಕೆಸಿಸಿ ಕಪ್ ಪಂದ್ಯಾವಳಿ ಇದೇ ತಿಂಗಳು 7, 8ರಂದು ನಡೆಯಲಿದೆ.ಇನ್ನು ಸಿನಿರಂಗದ ದಿಗ್ಗಜ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ ಕ್ರಿಕೇಟ್​ ಪ್ರ್ಯಾಕ್ಟಿಸ್​ ಮಾಡುತ್ತಿದ್ದರೇ ಸಾಕಷ್ಟು ಅಭಿಮಾನಿಗಳು ನೋಡಿ ಸಂಭ್ರಮಿಸಿದರು. ಅಲ್ಲದೇ ಶಿವಣ್ಣ ಬೌಲಿಂಗ್ ಪ್ರ್ಯಾಕ್ಟಿಸ್​ ಮಾಡಿದರು.

Avail Great Discounts on Amazon Today click here