ಶೂಟಿಂಗ್ ವೇಳೆ ತುಪ್ಪದ ಹುಡುಗಿ ರಾಗಿಣಿ ಕೆನ್ನೆಗೆ ಬಿತ್ತು ಪಂಚ್

ಸ್ಯಾಂಡಲವುಡ್​​​ನಲ್ಲಿ ಅವಾಂತರಗಳ ಸರಣಿ ಮುಂದುವರೆದಿದೆ. ಹೌದು ಎಂಎಂಸಿಎಚ್​​​ ಚಿತ್ರದ ಫೈಟಿಂಗ್​​ ಸೀನ್ ಶೂಟಿಂಗ್ ವೇಳೆ ಚಿತ್ರದ ನಾಯಕಿ ರಾಗಿಣಿಗೆ ಏಟಾಗಿದೆ. ಫೈಟ್​​​ ಮಾಸ್ಟರ್​​ ರಾಗಿಣಿಗೆ ಪಂಚ್ ಮಾಡುವ ದೃಶ್ಯದ ವೇಳೆ ನೇರವಾಣಿ ರಾಗಿಣಿ ಕೆನ್ನೆಗೆ ಪಂಚ್​​ ಬಿದ್ದಿದೆ. ಇದರಿಂದ ರಾಗಿಣಿ ಕುಸಿದು ಬಿದ್ದು, ಅಸ್ವಸ್ಥರಾಗಿದ್ದಾರೆ. ನಗರದ ಮಿನರ್ವಾ ಮಿಲ್​ ಬಳಿ ಎಂಎಂಸಿಎಚ್​​ ಚಿತ್ರದ ಆ್ಯಕ್ಷನ್​​ ದೃಶ್ಯವೊಂದರ ಚಿತ್ರೀಕರಣ ನಡೆದಿತ್ತು.

ಈ ವೇಳೆ ರೌಡಿಗಳು ರಾಗಿಣಿ ಮೇಲೆ ಅಟ್ಯಾಕ್ ಮಾಡುವ ದೃಶ್ಯದ ಚಿತ್ರೀಕರಣ ನಡೆಸುವಾಗ ಪಂಚ್ ಮಾಸ್ಟರ್​​ ಕೈ ರಾಗಿಣಿಗೆ ತಾಗಿದೆ. ತಕ್ಷಣ ರಾಗಿಣಿ ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದೀಗ ವೈದ್ಯರು ರಾಗಿಣಿಗೆ ಎರಡು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದು, ಚಿತ್ರೀಕರಣವನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಬಿಟಿವಿಗೆ ಚಿತ್ರದ ಸ್ಟಂಟ್ ಮಾಸ್ಟರ್​ ಕೌರವ ವೆಂಕಟೇಶ್ ಮಾಹಿತಿ ನೀಡಿದ್ದು, ಪಂಚ್​ ಮಾಡುವಾಗ ರಾಗಿಣಿಗೆ ಕೈ ತಾಗಿದೆ ಅಷ್ಟೇ. ರಾಗಿಣಿ ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಇನ್ನೆರಡು ದಿನಗಳಲ್ಲಿ ರಾಗಿಣಿ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದರು