ಖಡಕ್ ಪೊಲೀಸ್ ಅಧಿಕಾರಿಯಾಗಿ ಕನ್ನಡತಿ! ಪೋಟೋಗೆ ಮರುಳಾಯ್ತು ಸ್ಯಾಂಡಲ್ ವುಡ್

ಕನ್ನಡದ ಕರಾವಳಿ ಬೆಡಗಿ ನಟಿ ಲಕ್ಷ್ಮಿ ರೈ ಸದ್ಯ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ತುಂಬಾ ಹೆಸರು ಮಾಡುತ್ತಿದ್ದಾರೆ. ಅದರಲ್ಲೂ ಹಸಿ ಬಿಸಿ ದೃಶ್ಯಗಳು ಹಾಗೂ ಬೋಲ್ಡ್​ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.

ad

ಕನ್ನಡದಲ್ಲಿ ಸ್ನೇಹನಾ ಪ್ರೀತಿನ ಚಿತ್ರದಲ್ಲಿ ಚಾಲೇಂಜಿಗ್ ಸ್ಟಾರ್ ದರ್ಸನ್ ಗೆ ಜೋಡಿಯಾಗಿದ್ರು, ಹಾಗೂ ಕೆಲ ವರ್ಷಗಳ ಹಿಂದೆ ಉಪ್ಪಿ ಅಭಿನಯದ ಕಲ್ಪನ ಚಿತ್ರದಲ್ಲಿ ನಟಿಸಿದ್ದರು. ನಂತರ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ತುಂಬಾ ಬ್ಯುಸಿಯಾಗಿದ್ದರು. ಹಾಗೂ ಕೆಲ ತಿಂಗಳ ಹಿಂದೆ ಬಾಲಿವುಡ್ ನ ಜೂಲಿ – 2 ಚಿತ್ರದಲ್ಲಿ ನಟಿಯಾಗಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

 

ಸದ್ಯ ಲಕ್ಷ್ಮಿ ಕನ್ನಡಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅದು ಸಹ ಖಡಕ್​ ಪೊಲೀಸ್​ ಅಧಿಕಾರಿಯಾಗಿ ‘ಝಾನ್ಸಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಜಿಮ್​ನಲ್ಲಿ ಬೆವರಿಳಿಸುವುದರೊಂದಿಗೆ, ಮಾರ್ಷಲ್​ ಆರ್ಟ್ಸ್​ ಸಹ ಕಲಿತ್ತಿದ್ದಾರೆ. ಅವರ ಕೆಲವು ಫೋಟೋಗಳು ಈಗ ವೈರಲ್ ಆಗಿದೆ.