ಕಾಲಿವುಡ್ ಗೆ ಸ್ಯಾಂಡಲ್​ವುಡ್​​ ರಾಕಿಂಗ್ ಸ್ಟಾರ್​! ವಿಕ್ರಮ್​ಗೆ ಜೊತೆಯಾಗಲಿದ್ದಾರೆ ಯಶ್​​!!

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್​ ಈಗ ನ್ಯಾಷನಲ್ ಸ್ಟಾರ್​.ಕೆಜಿಎಫ್ ಸೂಪರ್ ಸಕ್ಸಸ್​ ಬಳಿಕ ರಾಕಿ ಭಾಯ್​ಗೆ ಬೇಡಿಕೆ ಹೆಚ್ಚಿದ್ದು,  ಕಾಲಿವುಡ್​ ಚಿಯಾನ್​ ಸ್ಟಾರ್ ವಿಕ್ರಮ್ ನಟನೆಯ 58ನೇ ಸಿನಿಮಾದಲ್ಲಿ ಆ್ಟಕ್ಟ್​ ಮಾಡಲಿದ್ದಾರೆ .

ad

ಹೌದು  ಕೆಜಿಎಫ್​-2 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಯಶ್.  ಕಾಲಿವುಡ್​ ಚಿಯಾನ್​ ಸ್ಟಾರ್ ವಿಕ್ರಮ್ ನಟನೆಯ 58ನೇ ಸಿನಿಮಾದಲ್ಲಿ ಆ್ಟಕ್ಟ್​ ಮಾಡಲಿದ್ದು ಕಳೆದ ತಿಂಗಳು ವಿಕ್ರಮ್​​​ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದ್ದು. ಇದೇ ಸಿನಿಮಾದಲ್ಲಿ ಯಶ್ ಅಭಿನಯಿಸುತ್ತಿದ್ದಾರೆ ಎನ್ನಲಾಗ್ತಿದೆ.

ಇನ್ನು  ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಯಶ್ ಹಾಗೂ ವಿಕ್ರಮ್ ಒಟ್ಟಿಗಿರೋ ಫೋಟೋವೊಂದು ಸಖತ್ ವೈರಲ್ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಯಶ್ ಹಾಗೂ ವಿಕ್ರಮ್ ಜೊತೆಗೆ ನಟಿಸಲಿದ್ದಾರೆ ಅಂತಾ ಖುಷಿಯಾಗಿದ್ದಾರೆ. ಆದ್ರೆ ಈ ಬಗ್ಗೆ ಯಶ್ ಆಗಲೀ, ವಿಕ್ರಮ್ ಆಗಲೀ ಅಫೀಯಿಷಲ್ ಆಗಿ ಅನೌನ್ಸ್ ಮಾಡಿಲ್ಲ.

ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ‘ಕೆ.ಜಿ.ಎಫ್’ ಚಿತ್ರದ ಎರಡನೇ ಭಾಗದ ಕೆಲಸಗಳು ಪ್ರಾರಂಭವಾಗಿದೆ. ಖಡಕ್ ಲುಕ್, ಜಬರ್ದಸ್ತ್​ ಡೈಲಾಗ್​ಗಳ ಮೂಲಕ ವಿಶ್ವದಾದ್ಯಂತ ಆರ್ಭಟಿಸಿದ್ದ ರಾಕಿ ಭಾಯ್​ಯ ರಿ ಎಂಟ್ರಿಗೆ ಭರ್ಜರಿ ತಯಾರಿಗಳು ನಡೆಯುತ್ತಿದ್ದರೆ, ಚಾಪ್ಟರ್​-​ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್​ ಹೇಗೆ ಕಾಣಿಸಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹುಟ್ಟಿಕೊಂಡಿದೆ.