Sasikala paid Rs 2 crore bribe for VIP treatment in jail: DIG D Roopa report | ಜೈಲಿನ ಅಕ್ರಮ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧ ಷಡ್ಯಂತ್ರ ಪರಪ್ಪನ ಅಗ್ರಹಾರದ ಅಕ್ರಮ ಬಯಲಿಗೆಳೆದಿದ್ದ ಡಿಐಜಿ ರೂಪಾ

0
16

ಜೈಲಿನ ಅಕ್ರಮ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧ ಷಡ್ಯಂತ್ರ
ಪರಪ್ಪನ ಅಗ್ರಹಾರದ ಅಕ್ರಮ ಬಯಲಿಗೆಳೆದಿದ್ದ ಡಿಐಜಿ ರೂಪಾ
ಕರ್ಮಕಾಂಡ ಬಯಲು ಮಾಡಿದ್ದಕ್ಕೆ ರೂಪಾ ವಿರುದ್ಧ ಷಡ್ಯಂತ್ರ
ಡಿಐಜಿ ರೂಪಾ ವಿರುದ್ಧ ಕೈದಿಗಳನ್ನು ಎತ್ತಿಕಟ್ಟಲು ಯತ್ನ
ಕೆಲ ಮಾಧ್ಯಮಗಳನ್ನು ಬಳಸಿಕೊಂಡು ರೂಪಾ ವಿರುದ್ಧ ಷಡ್ಯಂತ್ರ
ಜೈಲಿನಲ್ಲಿ ನಡೀತಿರೋ ಅಕ್ರಮವನ್ನು ಬಯಲಿಗೆಳೆದಿದ್ದೇ ತಪ್ಪಾ?
ಜೈಲಿನ ವ್ಯವಸ್ಥೆ ಸರಿಪಡಿಸಿ ಅಂತಾ ರೂಪಾ ಪತ್ರ ಬರೆದಿದ್ದು ಅಪರಾಧವೇ?
ಹಾಗಿದ್ದರೆ ಜೈಲುಗಳ ಕರ್ಮಕಾಂಡವನ್ನು ಸರಿಪಡಿಸೋರು ಯಾರು?
ಡಿಐಜಿ ರೂಪಾ ವಿರುದ್ಧ ಷಡ್ಯಂತ್ರ

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದುದುವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಈಗ ಬಟಾಬಯಲಾಗಿದೆ. ಜೈಲಿನಲ್ಲಿ ಕೈದಿಗಳಿಗೆ ಹೈ ಫೈ ಟ್ರೀಟ್‌ಮೆಂಟ್ ನೀಡ್ತಿರೋದನ್ನ ಡಿಐಜಿ ರೂಪಾ ಸ್ಫೋಟಕ ಸತ್ಯವನ್ನ ಬಯಲೆಗಿದ್ದಾರೆ. ನಕಲಿ ಚಾಪಾ ಕಾಗದ ಹಗರಣದ ಆರೋಪಿ ಕರೀಂ ಲಾಲ್‌ ತೆಲಗಿ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ರಂತಹ ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ ಇದೆ ಅನ್ನೊದನ್ನ ಡಿಐಜಿ ರೂಪಾ, ಕಾರಾಗೃಹ ಡಿಜಿ ಸತ್ಯನಾರಾಣ ರಾವ್ ಹಾಗೂ ರಾಜ್ಯ ಪೊಲಿಸ್ ಮಹಾ ನಿರ್ದೇಶಕ ಆರ್​ಕೆ ದತ್ತಾರಿಗೆ ಪತ್ರ ಬರೆದಿದ್ದಾರೆ. ಕರೀಂ ಲಾಲ್ ತೆಲಗಿಗೆ ವ್ಹೀಲ್‌ಚೇರ್ ಕೊಡಬೇಕೆಂದು ಕೋರ್ಟ್ ಆದೇಶ ಮಾಡಿತ್ತು. ಆದ್ರೆ ಈಗ ವ್ಹೀಲ್‌ಚೇರ್ ಇಲ್ಲದೆಯೂ ಆತ ನಡೆದಾಡುತ್ತಾನೆ. ತೆಲಗಿಗೆಂದೇ ವಿಶೇಷ ಕೊಠಡಿ ಇದ್ದು, ಅಲ್ಲಿ ಸಜಾ ಕೈದಿಗಳು ಆತನ ಸೇವೆಯಲ್ಲಿ ತೊಡಗಿರುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜೈಲಿನಲ್ಲಿ ಶಶಿಕಲಾಗೋಸ್ಕರವೇ ಪ್ರತ್ಯೇಕ ಅಡುಗೆ ಮನೆ ಮಾಡಲಾಗಿದೆ. ಈ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳು 2 ಕೋಟಿಯಷ್ಟು ಲಂಚ ಪಡೆದಿದ್ದಾರೆ ಅನ್ನೋ ಮಾಹಿತಿ ಕೂಡ ಪತ್ರದಲ್ಲಿದೆ. ಇದೀಗ ಇದು ಭಾರೀ ರೂಪಾ ಮತ್ತು ಸತ್ಯನಾರಾಯಣ ಮಧ್ಯೆ ವಾರ್​ಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here