ಉಡುಪಿ ಅಷ್ಟಮಠದಲ್ಲಿ ಮಧ್ಯರಾತ್ರಿ ಸ್ವಾಮೀಜಿಗಳು ಸೇರಿದ್ಯಾಕೆ ? ಶಿರೂರು ಸ್ವಾಮೀಜಿ ವಿರುದ್ದ ಕ್ರಮ ?

ಶಿರೂರು ಶ್ರೀಗಳ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಅಷ್ಟ ಮಠದ ಸ್ವಾಮೀಜಿಗಳಿಂದ ರಾತೋ ರಾತ್ರಿ ರಹಸ್ಯ ಸಭೆ ನಡೆಸಲಾಗಿದೆ.

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ವಿಡಿಯೋ ಪ್ರಸಾರವಾದ ಬೆಳವಣಿಗೆ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲು ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಷ್ಟ ಮಠದ ಸ್ವಾಮೀಜಿಗಳು ರಹಸ್ಯ ಸಭೆ ನಡೆಸಿದ್ದಾರೆ. ಆದರೆ ರಹಸ್ಯ ಚರ್ಚೆಯ ಬಗ್ಗೆ ಯಾವುದೆ ಮಾಹಿತಿ ಹೊರಬಿಟ್ಟು ಕೊಟ್ಟಿಲ್ಲ. ಇನ್ನು ಈ ರಹಸ್ಯ ಚರ್ಚೆಯಲ್ಲಿ ಶಿರೂರು ಮಠದ ಸ್ವಾಮೀಜಿಗಳು ಗೈರಾಗಿದ್ದಾರೆ. ಉಡುಪಿಯ ಅಷ್ಟಮಠದ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ.

ನನಗೂ ಮಕ್ಕಳಿದ್ದಾರೆ ಎಂದು ಶಿರೂರು ಸ್ವಾಮೀಜಿಗಳು ಹೇಳಿದ್ದ ವಿಡಿಯೋ ಬಹಿರಂಗಗೊಂಡಿತ್ತು. ಅದಲ್ಲದೆ ವಿಶ್ವಭಾರತಿ ಸ್ವಾಮಿ ಮತ್ತು ಶಿರೂರು ಸ್ವಾಮಿ ಸಂಭಾಷಣೆಯಲ್ಲಿ ಕಾಣಿಯೂರು ಮಠದ ತೊಟ್ಟಿಲು ಪುರಾಣದ ಬಗ್ಗೆ ಮಾತನಾಡಿದ್ದರು. ಮಾತ್ರವಲ್ಲದೆ, ತನಗೊಂದು ನ್ಯಾಯ ಪರರಿಗೊಂದು ನ್ಯಾಯ ಅನುಸರಿಸುತ್ತಿರುವ ಪೇಜಾವರಶ್ರೀಗಳನ್ನು ಕೊಲೆ ಮಾಡುವುದಾಗಿ ಶಿರೂರು ಶ್ರಿಗಳು ಹೇಳಿದ್ದರು. ಈ ಹಿನ್ನಲೆಯಲ್ಲಿ ಮದ್ಯರಾತ್ರಿ ಅಷ್ಟಮಠಾಧೀಶರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.

Avail Great Discounts on Amazon Today click here