ಪಕೋಡಾ ಮಾರೋದು ತಪ್ಪಲ್ಲ- ರಾಜ್ಯಸಭೆಯಲ್ಲಿ ಶಾ ಸಮರ್ಥನೆ!!

ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿರುವ ಯುವಕರು ಪಕೋಡಾ ಮಾರಿ ಬದುಕಬಹುದು ಎಂಬ ಹೇಳಿಕೆಗೆ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು.

ad

ಅದನ್ನು ಟೀಕಿಸುವ ಉದ್ದೇಶದಿಂದ ನಿನ್ನೆ ಬೆಂಗಳೂರಿನ ಪರಿವರ್ತನಾ ರ್ಯಾಲಿ ನಡೆದ ವೇಳೆಯೂ ವಿದ್ಯಾರ್ಥಿ ಸಂಘಟನೆಗಳು, ಮುಖಂಡರು ಪಕೋಡಾ ಮಾರಿ ವ್ಯೆಂಗ್ಯವಾಡಿದ್ದರು. ಇದೀಗ ಪಕೋಡಾ ಮಾರುವುದು ನಾಚಿಕೆ ವಿಚಾರವಲ್ಲ ಎಂದು ಸ್ವತಃ ಅಮಿತ್​ ಶಾ ಹೇಳಿದ್ದು ಮತ್ತಷ್ಟು ಚರ್ಚೆ ಗುರಿಯಾಗಿದೆ. ರಾಜ್ಯಸಭೆಯಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಅಮಿತ್ ಶಾ ಯುವಕರು ಪಕೋಡಾ ಮಾರುವುದು ನಾಚಿಕೆ ವಿಷಯವಲ್ಲ. ನಿರುದ್ಯೋಗಕ್ಕಿಂತ ಪಕೋಡಾ ಮಾರೋದು ಉತ್ತಮ. ಸ್ವ ಉದ್ಯೋಗದಿಂದಲೇ ಯುವಕರು ಮುಂದೇ ಬರುವುದು ಎಂದಿದ್ದಾರೆ.

ಇನ್ನು ಸ್ವಯಂ ಉದ್ಯೋಗ ಮಾಡುವವರನ್ನು ಭಿಕ್ಷುಕರಿಗೆ ಹೋಲಿಸಿರುವುದಕ್ಕೆ ಕಿಡಿಕಾರಿದ ಅಮಿತ್ ಶಾ ಇದು ಸರಿಯಲ್ಲ. ಯುವಕರ ಸ್ವಾವಲಂಬನೆಯ ಪ್ರಯತ್ನವನ್ನು ಶ್ಲಾಘಿಸಬೇಕು. ಅದರ ಬದಲು ಈ ರೀತಿ ಟೀಕಿಸುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಈಗಾಗಲೇ ಕಾಂಗ್ರೆಸ್ ಪಕೋಡಾ ಮಾರುವ ವಿಚಾರಕ್ಕೆ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಉಗ್ರ ಟೀಕೆಗೆ ಮುಂಧಾಗಿರುವ ಬೆನ್ನಲ್ಲೇ ಮತ್ತೆ ಶಾ ಹೇಳಿಕೆ ಹೊಸ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.