ಕಾಂಗ್ರೆಸ್​ ಯುವರಾಜ್​ನ ಮುಂದೇ ಪೂಜಾರಿ ಕಣ್ಣಿರಿಟ್ಟಿದ್ದು ಯಾಕೆ ಗೊತ್ತಾ?

ರಾಜ್ಯ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಈಗಾಗಲೇ ಹಲವು ಭಾರಿ ಸಾಬೀತಾಗಿದೆ.

ಒಂದೆಡೆ ಜಿ.ಪರಮೇಶ್ವರ್​​ ರನ್ನು ಮೂಲೆಗುಂಪು ಮಾಡಲು ಸಿಎಂ ಸಿದ್ದರಾಮಯ್ಯ ಸರ್ಕಸ್​ ಮಾಡ್ತಿದ್ದರೇ ಇತ್ತ ಸಿಎಂ ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಕುರಿತು ಈ ಹಿಂದಿನಿಂದಲೂ ಕಾಂಗ್ರೆಸ್​ ಹಿರಿಯ ನಾಯಕ ಜನಾರ್ಧನ್ ಪೂಜಾರಿ ಅಸಮಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ನಿನ್ನೆ ರಾಹುಲ್​ ಗಾಂಧಿ ಜರ್ನಾಧನ್ ಪೂಜಾರಿಯವರ ಕುದ್ರೋಳಿ ದೇವಾಲಯ ಭೇಟಿ ವೇಳೆ ಕೂಡ ಇದು ಬಯಲಿದೆ ಬಂದಿದ್ದು, ಕಾಂಗ್ರೆಸ್​ ಯುವರಾಜನ ಎದುರು ಜನಾರ್ಧನ್ ಪೂಜಾರಿ ಕಣ್ಣೀರಿಡುವ ಮೂಲಕ ಕಾಂಗ್ರೆಸ್​ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಳಲು ತೋಡಿಕೊಂಡಿದ್ದಾರೆ.

ಹೌದು ನಿನ್ನೆ ಕಾಂಗ್ರೆಸ್​​ನ ಯುವರಾಜ ಮಂಗಳೂರು-ಉಡುಪಿ ಭೇಟಿ ವೇಳೆ ಸಂಜೆ ಕುದ್ರೋಳಿ ಗೋಕರ್ಣಾಥೇಶ್ವರ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಹುಲ್ ಸ್ವಾಗತಿಸಲು ಬಂದ ಜನಾರ್ಧನ್ ಪೂಜಾರಿ ರಾಹುಲ್ ಎದುರಿಗೆ ಬರುತ್ತಿದ್ದಂತೆ ಕಣ್ಣಿರಿಟ್ಟರು. ತಮ್ಮೇದುರು ಹಿರಿಯ ಕಾಂಗ್ರೆಸ್ ನಾಯಕ ಪೂಜಾರಿ ಕಣ್ಣೀರಿಡುತ್ತಿದ್ದಂತೆ ರಾಹುಲ್​ ಅವರನ್ನು ತಬ್ಬಿಕೊಂಡು ಸಮಾಧಾನ ಪಡಿಸಿದರು. ಈ ವೇಳೆ ಪೂಜಾರಿ ತಮ್ಮ ಅನಾರೋಗ್ಯ ಹಾಗೂ ಸತತವಾಗಿ ಕಾಂಗ್ರೆಸ್​ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ನೋವು ಹಂಚಿಕೊಂಡಿದ್ದಾರೆ.

ಬಳಿಕ ಅವರನ್ನು ಸಮಾಧಾನ ಪಡಿಸಿದ ರಾಹುಲ್ ಗಾಂಧಿ, ಅವರ ಕೈಹಿಡಿದುಕೊಂಡೇ ದೇವಸ್ಥಾನ ವೀಕ್ಷಿಸಿದರು. ಈ ಸಂದರ್ಭ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯಸಭಾ ಸದಸ್ಯ ಹರಿಪ್ರಸಾದ್, ಎಐಸಿಸಿ ಪ್ರ.ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಮೊಯ್ದಿನ್ ಬಾವಾ, ಐವನ್ ಡಿಸೋಜ, ಮೇಯರ್ ಬಾಸ್ಕರ್ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.