ಇದು ರಾಜ್ಯದ ಕ್ರೀಡಾಲೋಕವನ್ನೇ ಬೆಚ್ಚಿಬೀಳಿಸುವ ಸುದ್ದಿ. ಹೌದು ರಾಜ್ಯದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯೊಂದರಲ್ಲಿ ಸಂಸ್ಥೆಯ ಮಾಲೀಕರ ಮಗನೇ ಕಾಮುಕನಾಗಿದ್ದು, ಕ್ರೀಡಾ ತರಬೇತಿಗಾಗಿ ದೇಶದ ವಿವಿಧೆಡೆಯಿಂದ ಬಂದ ಯುವತಿಯರನ್ನು ತನ್ನ ರಂಗಿನಾಟಕ್ಕೆ ಬಳಸಿಕೊಂಡು ಸುದ್ದಿಯಾಗಿದ್ದಾನೆ.
ಬೆಳಗಾವಿ ಶಿವಗಂಗಾ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷರ ಪುತ್ರ ಅನಿಕೇತ ಹೀಗೆ ಕಾಮದಾಟವಾಡಿ ಸುದ್ದಿಯಾಗಿದ್ದಾನೆ. ಸ್ಕೇಟಿಂಗ್ ಕ್ಲಬ್ನ ಮಾಲೀಕರಾದ ಜ್ಯೋತಿ ಚಿಂಡಕ ಪುತ್ರ ಅನಿಕೇತ ಸ್ವತಃ ಸ್ಕೇಟಿಂಗ್ ಕ್ರೀಡಾಪಟು. ಜ್ಯೋತಿ ಚಿಂಡಕ ಅವರು ತಮ್ಮ ಸಂಸ್ಥೆಯಲ್ಲಿ ರಂಗೋಲಿ, ಡ್ಯಾನ್ಸ್ ಜೊತೆಗೆ ಸ್ಕೇಟಿಂಗ್ ತರಬೇತಿ ನೀಡುತ್ತಾರೆ. ಹೀಗೆ ವಿವಿಧ ತರಬೇತಿಗೆ ಬರುವ ಯುವತಿಯರ ಜೊತೆ ಅನಿಕೇತನ ದೈಹಿಕ ಸಂಬಂಧ ಬೆಳೆಸಿದ್ದು, ಖಾಸಗಿ ಕ್ಷಣಗಳನ್ನು ಪೋಟೋ ತೆಗೆದುಕೊಂಡಿದ್ದಾನೆ.
ಈ ಶಿವಗಂಗಾ ಸ್ಕೇಟಿಂಗ್ ಮಾಲೀಕನ ಪುತ್ರನ ರಂಗಿನಾಟದ ಪೋಟೋಗಳು ಸಖತ್ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಇದೇ ಕ್ರೀಡಾಸಂಸ್ಥೆಯ ಹಾಸ್ಟೇಲ್ನಲ್ಲಿ ಇದೀಗ ಚಳಿಗಾಲ ಅಧಿವೇಶನಕ್ಕೆ ಆಗಮಿಸಿರುವ ಮಹಿಳಾ ಪೊಲೀಸ್ ಸಿಬ್ಬಂದಿಗೆ ವಸತಿ ಕಲ್ಪಿಸಲಾಗಿದ್ದು, ಇದು ಕೂಡ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅನಿಕೇತ ಈ ಸೆಕ್ಸ್ ಕರ್ಮಕಾಂಡದ ಬಗ್ಗೆ ಯಾವುದೇ ಯುವತಿಯರು ಇದುವರೆಗೂ ದೂರು ದಾಖಲಿಸಿಲ್ಲ.
Super agide Ella news