ಇಲ್ಲಿ ಶೇವಿಂಗ್ ಮಾಡೋದೇ ಚಿನ್ನದ ರೇಜರ್​​ನಿಂದ- ಅದೆಲ್ಲಿ? ಅಂದ್ರಾ ಈ ಸ್ಟೋರಿ ನೋಡಿ!

 

ರಾಜ, ಮಹಾರಾಜರು, ಆಗರ್ಭ ಶ್ರೀಮಂತರು ಚಿನ್ನ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡ್ತಾರೆ ಅಂತ ಕೇಳಿದ್ವಿ. ಆದ್ರೆ ಇಲ್ಲೊಬ್ಬ ಕ್ಷೌರಿಕ ಕ್ಷೌರ ಮಾಡಲು ಬಳಸ್ತಿರೋದೇನ್ ಗೊತ್ತಾ..? ಚಿನ್ನದ ರೇಜರ್. ಹೌದು ಮಹಾರಾಷ್ಟ್ರದ ಸಾಂಗ್ಲಿಯ ಗಾಂವಬಾಗ್‌ನ ಮಾಲೀಕ ರಾಮಚಂದ್ರ ಚಿನ್ನದ ರೇಜರ್ ಬಳಸಿ ಗ್ರಾಹಕರಿಗೆ ಶೇವ್ ಮಾಡ್ತಾರೆ. ಈ ರೇಜರ್​ನ್ನು 3.55 ಲಕ್ಷ ರೂ. ವೆಚ್ಚದಲ್ಲಿ 105 ಗ್ರಾಂ ನ 18 ಕ್ಯಾರೆಟ್‌ ಚಿನ್ನ ಬಳಸಿ ಸಿದ್ಧಪಡಿಸಲಾಗಿದೆ. ತಲೆತಲಾಂತರದಿಂದ ಕ್ಷೌರವನ್ನೇ ವೃತ್ತಿಯನ್ನಾಗಿ ಮಾಡ್ತಿದ್ದಾರೆ ರಾಮಚಂದ್ರ. ತಿಂಗಳ ಹಿಂದೆ ನಡೆದ ತಮ್ಮ ತಂದೆ–ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಚಿನ್ನದ ರೇಜರ್ ಬಳಸುವುದಕ್ಕೆ ಆರಂಭಿಸಿದ್ದಾರೆ. ಅಂದ್ಹಾಗೆ ಚಿನ್ನದ ರೇಜರ್​ನಿಂದ ಗ್ರಾಹಕರು ಮಾಡಿಸಿಕೊಳ್ಳುವ ಶೆವಿಂಗ್ ರೇಟ್ 200 ರೂಪಾಯಿ.

ಚಿನ್ನದ ರೇಜರ್​ನಿಂದ ಶೇವಿಂಗ್ ಮಾಡಿಸಿಕೊಳ್ಳಬೇಕೆಂದ್ರೆ 2 ದಿನ ಮೊದಲೇ ಬುಕ್ ಮಾಡಬೇಕಂತೆ.ಇನ್ನು ಸಾಕಷ್ಟು ಜನರು ಈ ಚಿನ್ನದ ರೇಜರ್​​ನ ಶೇವಿಂಗ್​ ಮಾಡಿಸಿಕೊಳ್ಳುವ ಅನುಭವಕ್ಕಾಗಿಯೇ ಇವರ ಶೇವಿಂಗ್​ ಅಂಗಡಿಗೆ ಮುಗಿಬೀಳುತ್ತಿದ್ದಾರಂತೆ. ಜನ ಮರುಳೋ ಜಾತ್ರೆ ಮರುಳೋ ಅನ್ನೋದನ್ನು ಇವರನ್ನು ನೋಡಿಯೇ ಹೇಳಿರಬೇಕು ಅನ್ಸುತ್ತೆ.