ಈಕೆ ಪ್ರಿಯಾಂಕಾ ಚೋಪ್ರಾ ಪ್ರತಿರೂಪ! ಜ್ಯೂನಿಯರ್ ಪಿಗ್ಗಿ ಕಂಡು ಅಭಿಮಾನಿಗಳೇ ಶಾಕ್​​​!!

ಪ್ರಿಯಾಂಕಾ ಚೋಪ್ರಾ… ಬಾಲಿವುಡ್​​ನ ಹಾಟ್ ಆ್ಯಂಡ್ ಮೋಸ್ಟ್ ಸೆಕ್ಸಿಯೆಸ್ಟ್ ನಟಿ.. ವಿಶ್ವದಾದ್ಯಂತ ಫ್ಯಾನ್​ ಫಾಲೋವರ್ಸ್ ಹೊಂದಿರೋ ಬೆಡಗಿ.. ಬಿಟೌನ್ ಮಾತ್ರವಲ್ಲದೆ ತನ್ನ ಪ್ರತಿಭೆಯಿಂದ್ಲೆ ಹಾಲಿವುಡ್​​​​ನಲ್ಲು ಚಾನ್ಸ್​ ಗಿಟ್ಟಿಸಿಕೊಂಡಿದ್ದ ಬ್ಯೂಟಿ.ಪ್ರಿಯಾಂಕಾ ಚೋಪ್ರಾ ಏಷ್ಯದಲ್ಲೇ ನಂಬರ್ ಒನ್ ಸೆಕ್ಸಿಯೆಸ್ಟ್ ನಟಿ ಅನ್ನೋ ಪಟ್ಟ ಗಿಟ್ಟಿಸಿಕೊಂಡಾಕೆ. ಲಂಡನ್ ಮೂಲದ ವಾರ ಪತ್ರಿಕೆ ‘ಈಸ್ಟರ್ನ್ ಐ’ಪ್ರತಿ ವರ್ಷ ನಡೆಸೊ ಸ್ಪರ್ಧೆಯಲ್ಲಿ ಪಿಗ್ಗಿ ಅತೀ ಹೆಚ್ಚು ಮತಗಳನ್ನ ಪಡೆದುಕೊಂಡು ಸೆಕ್ಸಿಯೆಸ್ಟ್ ಏಷ್ಯನ್ ವುಮನ್ ಪಟ್ಟ ಅಲಂಕರಿಸಿದ್ಲು. ಇಷ್ಟೆಲ್ಲ ಸಾಧನೆ ಮಾಡಿರೋ ಪ್ರಿಯಾಂಕಾಗೆ ಪ್ರತಿರೂಪದ ಪಿಗ್ಗಿಯೊಬ್ಬಳು ಸಿಕ್ಕಿದ್ದಾಳಂತೆ.

ad

ಹೌದು

ಇಂಥ ಪಿಗ್ಗಿಯನ್ನೇ ಹೋಲುವ ಇನ್ನೊಬ್ಬಳು ಚೆಲುವೆ ಇದ್ದಾಳೆ ಅಂದ್ರೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಹೌದು ಪ್ರಪಂಚದಲ್ಲಿ ಒಂದೇ ತರ ಹೋಲಿಕೆ ಇರುವವರು ಏಳು ಮಂದಿ ಇರ್ತಾರೆ ಅಂತಾರೆ. ಸದ್ಯ ದೇಸಿ ಗರ್ಲ್ ಪಿಗ್ಗಿ ವಿಷಯದಲ್ಲಿ ನಿಜ ಆಗಿದೆ.ಪ್ರಿಯಾಂಕ ಚೋಪ್ರಾ ಹೋಲಿಕೆಯುಳ್ಳ ಚೆಲುವೆಯೇ ನವಪ್ರೀತ್ ಬಂಗಾ. ಥೇಟ್ ನಟಿ ಪ್ರಿಯಾಂಕರನ್ನೇ ಹೋಲುತ್ತಾಳೆ ಅನ್ನೋದೇ ಈ ಹುಡ್ಗಿಯ ಕ್ರೆಡಿಟ್​. ಮಾಧ್ಯಮ ಲೋಕ ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ಜೂನಿಯರ್​ ಪಿಗ್ಗಿಯಂದೆ ಫೇಮಸ್​.

ಈಕೆ ಮೂಲತಃ ಇಂಡಿಯನ್​ ಆದ್ರು ನೆಲೆಸಿರೋದು ದೂರದ ಕೆನಡಾದಲ್ಲಿ. ಎರಡು ವರ್ಷಗಳ ಹಿಂದೆ ಯಾರೋ ಭಾರತದವರು ನೋಡೋಕೆ ನಟಿ ಪ್ರಿಯಾಂಕ ತರಾ ಇದ್ದಿಯಾ ಅಂದಿದ್ದೆ ತಡ ಈ ಹುಡ್ಗಿಯ ಡಿಮ್ಯಾಂಡ್ ಸರ್ರನೆ ಏರಿದೆ. ಆರೋಗ್ಯ ಮತ್ತು ಫಿಟ್ನೆಸ್ ಕುರಿತ ವಿಡೀಯೋಗಳನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುವುದು ಈಕೆಯ ಕಾಯಕ. ಆದ್ರೆ ಆಗ ಅಷ್ಟೊಂದು ಖ್ಯಾತಿಗೊಳ್ಳದ ಈಕೆ ಸೌಂಡ್​ ಮಾಡಿದ್ದು ಪ್ರಿಯಾಂಕ ಚೋಪ್ರಾ ತದ್ರೂಪಿ ಅಂತ ಖ್ಯಾತಿಗೆ ಬಂದ್ಮೇಲೆ.

ಯಾವಾಗ ಈಕೆ ಪಿಗ್ಗಿ ಥರ ತರ ಬಟ್ಟೆ ಧರಿಸಿ ಪೋಸ್​ ಕೊಟ್ಟು ಫೋಟೋ ಕ್ಲಿಕ್ಕಿಸೋಕೆ ಶುರುಮಾಡ್ಲಿದ್ಲೋ ಈಕೆಗೂ ಪ್ಯಾನ್ಸ್​ ಹುಟ್ಕೊಂಡ್ರು. ಆಮೇಲಿಂದ ನವಪ್ರೀತ್​ ಬೇಡಿಕೆ ಆಕಾಶದೆತ್ತರಕ್ಕೆ ಏರಿತು. ಆಕೆಯ ಯೂಟ್ಯೂಬ್​ ಚಾನೆಲ್​​ ಮತ್ತು ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಸಂಖ್ಯೆ ಸಿಕ್ಕಾಪಟ್ಟೆ ಏರಿದೆ.

ಅಂದಹಾಗೆ ಇನ್​ಸ್ಟಾಗ್ರಾಮ್​​ನಲ್ಲಿ ಈಕೆ Brown Girl Lifts ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದ್ದಾಳೆ. ಈಕೆಯ ಫಿಟ್​ನೆಸ್​, ಬ್ಯೂಟಿ ಹಾಗೂ ಕ್ರಿಯೆಟಿವಿಟಿ ನೋಡಿ ಇನ್​ಸ್ಟಾಗ್ರಾಮ್​ ಈಕೆಗೆ ಸೆಲೆಬ್ರಿಟಿಗೆ ಸೀಗುವ ಬ್ಲೂ ಟಿಕ್​ನ್ನು ನೀಡಿದೆಆಕೆಯ ಯೂಟ್ಯೂಬ್​​ ಚಾನೆಲ್​​ ಹೆಸರು ಕೂಡ BrownGirlLifts TV. ಇದರಿಂದ್ಲೇ ಈಗ ಈಕೆ ತಿಂಗಳಿಗೆ ಲಕ್ಷ ಲಕ್ಷ ದುಡಿತಾಳೆ.

Navpreet-Banga-twitter

ಇದೆಲ್ಲಕ್ಕಿಂತ ಇಂಟ್ರಸ್ಟಿಂಗ್​ ಅಂದ್ರೆ ಸ್ವತಃ ನಟಿ ಪ್ರಿಯಾಂಕ ಕೂಡ ಅವರ ಅಮ್ಮನಿಗೆ ಈಕೆಯ ಫೋಟೋ ತೋರಿಸಿದ ವಿಷಯವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದರು. ನವಪ್ರೀತ್​​ನ ನೋಡಿ ಕೆಲವರು ‘ಪ್ರಿಯಾಂಕ ತರಾನೇ ಕಾಣಿಸುತ್ತಿದ್ದೀರಾ’ ಅಂದ್ರೆ ಇನ್ನೂ ಕೆಲವರು ‘ಪ್ರಿಯಾಂಕ ಕಾರ್ಬನ್ ಕಾಪಿ’ ಎಂಬಿತ್ಯಾದಿ ಕಾಮೆಂಟ್ ಮಾಡ್ತಾರೆ. ಒಟ್ನಲ್ಲಿ ನವಪ್ರೀತ್​ ಬಂಗಾ ಈಗ ಜೂನಿಯರ್​ ಫಿಗ್ಗಿ ಅಂತ್ಲೇ ಫೇಮಸ್​.