ಇಲ್ಲಿ ಕಳ್ಳರ ಬೆಂಬಲಕ್ಕೆ ನಿಂತವರೂ ಪೊಲೀಸರೇ- ಸಿಲಿಕಾನ ಸಿಟಿಯ ಕಳ್ಳ-ಪೊಲೀಸ್ ಆಟ ಹೇಗಿದೆ ಗೊತ್ತಾ?!

Shelter from Policers to thieves and supported for Thefting

ಕಳ್ಳತನ ಮಾಡಿದ ಕಳ್ಳರನ್ನು ಪೊಲೀಸರು ಬಂಧಿಸೋದನ್ನು ನೀವು ನೋಡ್ತಿರಾ. ಕಳ್ಳರನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿರೋದನ್ನು ನೋಡಿರ್ತಿರಾ. ಆದರೇ ಪೊಲೀಸರೇ ಕಳ್ಳರಿಗೆ ಬೆಂಬಲ ಕೊಟ್ಟು ಕಳ್ಳತನ ಮಾಡಿಸಿದ್ದು ಎಲ್ಲಾದ್ರೂ ನೋಡಿದ್ದೀರಾ? ಹೌದು ಸಿಲಿಕಾನ ಸಿಟಿಯಲ್ಲಿ ಇಂತಹದೊಂದು ವಿಲಕ್ಷಣ ಘಟನೆ ನಡೆದಿದ್ದು, ಇದೀಗ ಪೊಲೀಸರು ಕಳ್ಳರು ಹಾಗೂ ಕಳ್ಳತನಕ್ಕೆ ಸಹಕರಿಸುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ.

ad


ಜೆ.ಪಿ ನಗರದಲ್ಲಿ ಆರ್ಮುಗ ಮತ್ತು ಆತನ ಇಬ್ಬರು ಸಹಚರರು ಕಳ್ಳತನ ಕೃತ್ಯ ನಡೆಸುತ್ತಿದ್ದರು. ಆರೋಪಿಗಳು ಜೆಪಿನಗರದಲ್ಲೇ ಮನೆ ಮಾಡಿಕೊಂಡಿದ್ದರು. ಪ್ರಕರಣವೊಂದರ ತನಿಖೆ ವೇಳೆ ಈ ಕಳ್ಳರನ್ನು ಬಂಧಿಸಿದಾಗ ಕಳ್ಳರ ಹಿಂದಿನ ಖರ್ತನಾಕ ಕತೆ ಹೊರಬಂದಿದೆ. ಈ ಕಳ್ಳರಿಗೆ ಅನ್ನಪೂರ್ಣ ನಗರ ಪೊಲೀಸ್ ಠಾಣೆಯ ಮಧು ಎಂಬ ಪೇದೆ ಹಾಗೂ ಹೆಡ್​ಕಾನ್ಸಸ್ಟೇಬಲ್​ ಮಧು ಎಂಬಾತನ ಸಂಪೂರ್ಣ ಸಹಕಾರವಿತ್ತು. ಕಳ್ಳರಿಗೆ ಜೆಪಿ ನಗರದಲ್ಲಿ ಮನೆ ಮಾಡಿಕೊಟ್ಟಿದ್ದ ಮಧು, ಕಳ್ಳತನಕ್ಕೆ ಸ್ಕೆಚ್​ ಕೂಡ ಹಾಕಿಕೊಡುತ್ತಿದ್ದ. ಕಳ್ಳತನ ನಡೆದ 15 ದಿನದ ಬಳಿಕ ಆರ್ಮುಗ್ ಮತ್ತು ಆತನ ಸಹಚರರನ್ನು ಬಂಧಿಸುತ್ತಿದ್ದ ಮಧು ಆಭರಣಗಳನ್ನು ಜಪ್ತಿ ಮಾಡಿಕೊಳ್ಳುತ್ತಿದ್ದರು.

ಹೀಗೆ ಜಪ್ತಿ ಮಾಡಿದ ಆಭರಣದಲ್ಲಿ ಅರ್ಧದಷ್ಟನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಬಳಿಕ ಪೇದೆ ಮಧು ಮುಂದೇ ನಿಂತು ಇವರಿಗೆ ಜಾಮೀನು ಕೊಡಿಸುತ್ತಿದ್ದ ಎನ್ನಲಾಗಿದೆ. ಉಳಿದ ಚಿನ್ನವನ್ನು ದೂರುದಾರರಿಗೆ ನೀಡುತ್ತಿದ್ದ. ಇದೀಗ ಪ್ರಕರಣ ಬಯಲಿಗೆ ಬಂದಿದ್ದು, ಆ ಬಳಿಕ ಪೇದೆ ಮಧು ಮತ್ತು ಹೆಡ್​ಕಾನ್ಸಸ್ಟೇಬಲ್​​ ಕೆಲಸಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದೀಗ ಮೈಕೋಲೇಔಟ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.