ಶಿಖರ್ ಧವನ್​ ಗೆ ರಿಪ್ಲೇಸ್​ಮೆಂಟ್​ ವಿಚಾರ! ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂನಲ್ಲಿ ನಡೀತಾ ವಾರ್?!

ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ ಎನ್ನುವಷ್ಟರಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಆಘಾತ ಉಂಟಾಗಿದೆ. ಆಸ್ಟ್ರೇಲಿಯಾ ಪಂದ್ಯದ ವೇಳೆ ಆರಂಭಿಕ ಆಟಗಾರ ಶಿಖರ್ ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿರೋದರಿಂದ ದವನ್ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಆದರೆ ಅವರ ಬದಲಿ ಆಯ್ಕೆ ವೇಳೆಯಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.

ಇಂಗ್ಲೆಂಡಿನಲ್ಲಿ ಬೀಡುಬಿಟ್ಟಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅಂಡ್ ಟೀಮ್ ಧವನ್ ಗಾಯಗೊಂಡಿದ್ದೇ ತಡ ಧವನ್ ಸ್ಥಾನಕ್ಕೆ ರೀಪ್ಲೇಸ್ಮೆಂಟ್ ಯಾರು.? ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ  ಸಭೆ ನಡೆದಿದೆ. ಈ ವೇಳೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗ್ತಿದೆ.

ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಶಿಖರ್​ ಧವನ್​ಗೆ ಮೂರು ವಾರಗಳ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ ದವನ್ ಬೇಗ ಗುಣಮುಖರಾಗುವ ಭರವಸೆ ಇತ್ತು ಹೀಗಾಗಿ ಟೀಮ್ ಮ್ಯಾನೇಜ್​​ಮೆಂಟ್​​ಗೆ ಶಿಖರ್ ಧವನ್ ರೀಪ್ಲೇಸ್ಮೆಂಟ್ ಬೇಕಾಗಿರಲಿಲ್ಲ, ಆದ್ದರಿಂದಲೇ ಟೀಮ್ ಮ್ಯಾನೇಜ್ಮೆಂಟ್, ಬದಲಿ ಆಟಗಾರನ ಕುರಿತು ಬಿಸಿಸಿಐ ಅಥವಾ ಆಯ್ಕೆಗಾರರಲ್ಲಿ ಕೇಳಿಕೊಂಡಿರಲಿಲ್ಲ.

ಇದುವರೆಗು ರೀಪ್ಲೇಸ್ಮೆಂಟ್ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್ ನಡುವೆ ನಡೆದ ವಾದ-ವಿವಾದದ ವಿಚಾರದ ಬಗ್ಗೆ,ಇದುವರೆಗೂ ಯಾರೂ ಬಾಯಿ ಬಿಟ್ಟಿಲ್ಲ.ಆದ್ರೆ ವಿಶ್ವಕಪ್ ನಂತರ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ವಿಚಾರ, ಚರ್ಚೆಯಾಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಒಟ್ನಲ್ಲಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 117 ರನ್​ ಬಾರಿಸಿದ ಶಿಖರ್​ ಧವನ್​ ಹೀಗೆ ಗಾಯಗೊಂಡು ಟೀಂ ನಿಂದ ಹೊರಗುಳಿದಿರುವುದಂತು ಧವನ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿಸಿದೆ