ಹೆಣ್ಣುಮಕ್ಕಳಿಗೆ ರವಿಕೆ ಹಾಕಿಸಿದ್ದೇ ಟಿಪ್ಪು- ಕಾಂಗ್ರೆಸ್ ಎಂಎಲ್ಎ ಹೇಳಿಕೆ

ರಾಜ್ಯಸ ಹಲವೆಡೆ ಟಿಪ್ಪು ಜಯಂತಿ ಕೋಲಾಹಲವನ್ನೆ ಸೃಷ್ಟಿಸಿದ್ದರೇ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಟಿಪ್ಪುವನ್ನು ಹಿಗ್ಗಾಮುಗ್ಗಾ ಹೊಗಳುವ ಭರದಲ್ಲಿ ಮುಜುಗರದ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಶಿವಮೊಗ್ಗದ ಕುವೆಂಪು ರಂಗಮಂದಿರ ದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಶಾಸಕ ಪ್ರಸನ್ನಕುಮಾರ ಟಿಪ್ಪುವನ್ನು ಬಣ್ಣಿಸುವ ಆತುರದಲ್ಲಿ ಟಿಪ್ಪು ಕಾಲದಲ್ಲಿ ಕರ್ನಾಟಕದ ಹೆಣ್ಣುಮಕ್ಕಳು ರವಿಕೆಯನ್ನೇ ಹಾಕುತ್ತಿರಲಿಲ್ಲ. ಹೆಣ್ಣುಮಕ್ಕಳು ರವಿಕೆ ಹಾಕುವಂತೆ ಆದೇಶಿಸಿದ್ದೆ ಟಿಪ್ಪು ಎಂದಿದ್ದಾರೆ.

ಈ ಹೇಳಿಕೆ ಸ್ವತಃ ಕಾಂಗ್ರೆಸ್ಸಿಗರಿಗೆ ಮುಜುಗರ ತಂದಿದ್ದು, ರಾಜ್ಯದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ಅನಾದಿಕಾಲದಿಂದಲೂ ಸಂಸ್ಕೃತಿ,ಸಂಪ್ರದಾಯಕ್ಕೆ ಹೆಸರಾದ ನಮ್ಮ ನೆಲದ ಹೆಣ್ಣುಮಕ್ಕಳ ಬಗ್ಗೆ ಪ್ರಸನ್ನ ಕುಮಾರ್ ಅಗೌರವದಿಂದ ಮಾತನಾಡಿದ್ದು, ತಕ್ಷಣ ಕ್ಷಮೆಯಾಚಿಸಬೇಕೆಂದ ಒತ್ತಾಯವೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಆಚರಣೆಗೂ ಮುನ್ನವೇ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆ ವೇಳೆಯಲ್ಲೂ ರಾಜಕೀಯ ನಾಯಕರ ಅಜ್ಞಾನದಿಂದಾಗಿ ವಿವಾದ ಸೃಷ್ಟಿಸುತ್ತಿರೋದಂತು ಸತ್ಯ.