ಶಿವಮೊಗ್ಗದಲ್ಲಿ ಕಲುಷಿತ ನೀರಿಗೆ ಇಬ್ಬರು ಬಲಿ- ಹಲವರು ಅಸ್ವಸ್ಥ!!

ಗ್ರಾಮ ಪಂಚಾಯತ್​ನಿಂದ ಪೊರೈಸಲಾಗಿದ್ದ ಕಲುಷಿತ ನೀರು ಕುಡಿದು ಗ್ರಾಮಕ್ಕೆ ಗ್ರಾಮವೇ ವಾಂತಿಬೇಧಿಯಿಂದ ನರಳುತ್ತಿದ್ದು, ಮೂವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

 ಈ ಕರುಣಾಜನಕ ಘಟನೆಯಿಂದ ಗ್ರಾಮದಲ್ಲಿ ಸಶ್ಮಾನ ಮೌನ ಆವರಿಸಿದ್ದು, ಗ್ರಾಮ ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿ ಮೈದೊಳಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 75 ವರ್ಷದ ಶಿವಪ್ಪ, 42 ವರ್ಷದ ಹನುಮಂತಪ್ಪ ಮೃತರು. ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯತ್​ನಿಂದಲೇ ನೀರು ವಿತರಿಸಲಾಗಿತ್ತು. ಈ ನೀರು ಕುಡಿದ 42 ಮಂದಿಗೆ ವಾಂತಿ-ಬೇಧಿ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಶಿವಮೊಗ್ಗದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.

ಮೂರು ದಿನಗಳ ಹಿಂದೆ ಗ್ರಾಮ ಪಂಚಾಯತ್​​ನ ನೀರಿನ ಟ್ಯಾಂಕ್​​​​ನ್ನು ಸ್ವಚ್ಛಗೊಳಿಸಲಾಗಿತ್ತು. ಸ್ವಚ್ಛಗೊಳಿಸಲು ಬಳಸಲಾಗಿದ್ದ ಕೆಮಿಕಲ್​ನಿಂದ ಈ ಅನಾಹುತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಇನ್ನು ಘಟನೆ ನಡೆಯುತ್ತಿದ್ದಂತೆ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಿ ಜನರ ಆರೋಗ್ಯ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನು ಘಟನೆಗೆ ಕಾರಣವಾದ ಗ್ರಾಮ ಪಂಚಾಯತ್​​​​ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.