ಉಡುಪಿಯ ಅಷ್ಟಮಠದ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ!! ಕೃಷ್ಣದೇಗುಲದಲ್ಲಿ ನಡೆದಿದೆ ಕೊಲೆ,ದರೋಡೆ!! ಇದು ಅಷ್ಟಮಠದ ಸ್ವಾಮೀಜಿಯೇ ಬಿಚ್ಚಿಟ್ಟ ಸತ್ಯ!! ವಿಡಿಯೋ ವೈರಲ್

Shirur Lakshmi's Theertha Swamiji's Explosive Statement.
Shirur Lakshmi's Theertha Swamiji's Explosive Statement.

ಹೌದು. ಜಗದವಿಖ್ಯಾತ ಉಡುಪಿ ಕೃಷ್ಣದೇಗುಲದ ಅಷ್ಟಮಠದಲ್ಲಿ ಇಂತಹ ಕಪ್ಪುಚುಕ್ಕೆಗಳು ಇದೆಯಂದು ಖುದ್ದು ಅಷ್ಟಮಠದ ಸ್ವಾಮೀಜಿಗಳಲ್ಲಿ ಒಬ್ಬರಾದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಹೇಳಿರೋದು ಈಗ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ.

ವ್ಯಕ್ತಿಯೊಬ್ಬರ ಜೊತೆಗೆ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿಗಳು ಮಾತನಾಡಿರುವ ವಿಡಿಯೋ ಇದೀಗ ಬಹಿರಂಗವಾಗಿದ್ದು, ವಿಡಿಯೋದಲ್ಲಿನ ವಿಚಾರಗಳು ಧಾರ್ಮಿಕ ವಲಯವನ್ನು ಅಚ್ಚರಿಗೀಡು ಮಾಡಿದೆ. ಉಡುಪಿಯ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಭಾರತಕ್ಕೆ ಗುರುಗಳಾಗಿರುವವರು. ರಾಜಕಾರಣದ ಘಟಾನುಘಟಿಗಳು ಪೇಜಾವರರ ಆಶೀರ್ವಾದ ಪಡೆಯದೇ ಏನ್ನನ್ನು ಮಾಡುವುದಿಲ್ಲ.ಇಂತಹ ಹಿರಿಯ ಸ್ವಾಮೀಜಿಗಳಿರುವ ಉಡುಪಿ ಅಷ್ಟಮಠಗಳು ಅನೈತಿಕತೆಯ ಗೂಡಾಗಿವೆಯೇ ಎಂಬ ಪ್ರಶ್ನೆ ಶಿರೂರು ಸ್ವಾಮೀಜಿಗಳ ವಿಡಿಯೋದಿಂದ ಧರ್ಮಚಿಂತಕರನ್ನು ಕಾಡಲಾರಂಭಿಸಿದೆ.

ಇಲ್ಲಿನ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ನನಗೂ ಕೂಡ ಮಗನಿದ್ದಾನೆ. ಅದರಲ್ಲಿ ಮುಚ್ಚುಮರೆ ಏನು ಇಲ್ಲ. ನಮಗೆ 8 ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಕೊಡುತ್ತಾರೆ. ಆ ಸಂದರ್ಭದಲ್ಲಿ ನಮಗೆ ಲೋಕಜ್ಞಾನ ಇರುವುದಿಲ್ಲ. ವಯಸ್ಸು ಬೆಳೆಯುತ್ತಿದ್ದಂತೆ ನಮಗೆ ಆಸೆಗಳು ಪ್ರಾರಂಭವಾಗುತ್ತದೆ. ಯಾವುದೇ ಒಂದು ಘಟನೆ ನಡೆದು ಹೋಗುತ್ತದೆ ಎಂದು ಶಿರೂರು ಸ್ವಾಮೀಜಿಗಳು ವಿಡಿಯೋದಲ್ಲಿ ಹೇಳುತ್ತಾರೆ.
ಇಲ್ಲಿ ಹಲವು ಕೊಲೆಗಳು ನಡೆದಿದೆ. ಗಾಂಧೀಜಿಯ ಜೊತೆಗೆ ನಿಕಟ ಸಂಬಂಧಹೊಂದಿದ್ದ ವಿಶ್ವಮಾನ್ಯ ಸ್ವಾಮೀಜಿಗಳು ನಿಮಗೆ ಗೊತ್ತಲ್ವಾ? ಬಹಳ ಒಳ್ಳೆಯ ಸ್ವಾಮೀಜಿಗಳು.

ಅವರನ್ನು ಧಾರವಾಡದಲ್ಲಿ ಕೊಲೆ ಮಾಡಲಾಯಿತು. ಅವರು ತಿನ್ನುತ್ತಿದ್ದ ಇಡ್ಲಿಗೆ ವಿಷ ಹಾಕಲಾಯಿತು. ಇದು ಅಷ್ಟಮಠದ ಎಲ್ಲರಿಗೂ ಗೊತ್ತಿದೆ ಎಂದು ಶಿಶೂರು ಸ್ವಾಮೀಜಿ ಸ್ಪೋಟಕ ಮಾಹಿತಿಯನ್ನು ವಿಡಿಯೋದಲ್ಲಿ ಹೇಳಿದ್ದಾರೆ.  ಈಗಾಗಲೇ ಹಲವು ಭಾರಿ ಪರ್ಯಾಯ ಪೀಠವನ್ನು ಅಲಂಕರಿಸಿರುವ ಶಿರೂರು ಸ್ವಾಮೀಜಿಗಳು ಪರ್ಯಾಯದ ಬಗ್ಗೆ ಕೂಡ ವಿಡಿಯೋದಲ್ಲಿ ಮಾತನಾಡಿದ್ದಾರೆ. ಪರ್ಯಾಯ ಎನ್ನುವುದು ಹಣ ಮಾಡುವ ಸ್ಕೀಂ. ಪರ್ಯಾಯಕ್ಕೆಂದು 10 ಕೋಟಿ ರೂಪಾಯಿ ಇಟ್ಟು ಅದರಲ್ಲಿ 6 ಕೋಟಿಯನ್ನು ಸ್ವಾಮೀಜಿಗಳು ತಿಂದು ಹಾಕುತ್ತಾರೆ. ಊರಿಗೆಂದು ಏನು ಮಾಡಲ್ಲ. ಹೆಸರಿಗೆ ಸ್ವಾಮೀಜಿಗಳಿಗೆ ಸಂಸಾರವಿಲ್ಲ.

ಆದರೇ ಅವರ ತಂಗಿಯ ಮಕ್ಕಳು,ಅಣ್ಣನ ಮಕ್ಕಳೆಂದು ಮಠದಿಂದ ಕೋಟಿ-ಕೋಟಿ ಬಾಚುತ್ತಾರೆ. ಭಕ್ತರಿಗೆ ಸೇರಬೇಕಾದ ಹಣ ಯಾರದ್ದೋ ಪಾಲಾಗುತ್ತದೆ ಎಂದು ಶಿರೂರು ಸ್ವಾಮೀಜಿ ವಿಡಿಯೋದಲ್ಲಿ ಹೇಳುತ್ತಾರೆ.
ಶಿರೂರು ಸ್ವಾಮೀಜಿಗಳ ಈ ವಿಡಿಯೋ ಬಿಟಿವಿಗೆ ಲಭ್ಯವಾಗಿದ್ದು, ಪ್ರಸಾರವಾಗುತ್ತಿದ್ದಂತೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಅಷ್ಟ ಮಠದ ಸ್ವಾಮೀಜಿಗಳು ಶಿರೂರು ಸ್ವಾಮೀಜಿಯ ಆರೋಪದ ಬಗ್ಗೆ ಏನಂತಾರೇ ಎಂಬುದು ಸಧ್ಯದ ಕುತೂಹಲ.