ಕಂದಕಕ್ಕೆ ಉರುಳಿದ ಬಸ್. ಎಲ್ಲಾ ಪ್ರಯಾಣಿಕರೂ ಆಶ್ಚರ್ಯಕರ ರೀತಿಯಲ್ಲಿ ಪಾರು…ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ

ತಪ್ಪಿದ ಭಾರಿ ಅನಾಹುತ

ad

ಶಿವಮೊಗ್ಗ: ಕೆ.ಎಸ್.ಆರ್ ಟಿ ಸಿ ಬಸ್ ಕೆರೆಗೆ ಉರುಳಿದರೂ ಭಾರಿ ಅನಾಹುತವ ತಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ ೩೭ ಮಂದಿ ಪ್ರಯಾಣಿಕರು ಜೀವಪಾಯದಿಂದ ಪಾರಾಗಿ, ಸಣ್ಣಪುಟ್ಟ ಗಾಯಗಳಾಗಿವೆ. ಶಿವಮೊಗ್ಗ ತಾಲೂಕಿನ ಬೇಡರ ಹೊಸಳ್ಳಿ ಗ್ರಾಮದ ಬಳಿ ಇರುವ ಕೆರೆಗೆ ರಾಜ್ಯ ರಸ್ತೆ ಸಾರಿಗೆ ಬಸ್ ಉರುಳಿದೆ.

ಧರ್ಮಸ್ಥಳದಿಂದ ಯಲಬುರ್ಗಾ ಕಡೆ ಈ ಬಸ್ ತೆರಳುತ್ತಿದ್ದು, ಬಸ್ ಗೆ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕೆರೆಗೆ ಕಡೆ ತಿರುಗಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಹೇಗೋ ಗ್ರಾಮಸ್ಥರ ಸಹಾಯದಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದ ಪ್ರಯಾಣಿಕರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಗೆ ಉರುಳಿದ ಬಸ್ ನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ.