ಶಿವಸೇನೆ ಸೈನಿಕರು ಅಖಾಡಕ್ಕೆ… ಕುರುಕ್ಷೇತ್ರದಲ್ಲಿ ಎಂಟ್ರಿಯಾದ 21 ಸೈನಿಕರು… ನಕಲಿ ಹಿಂದುತ್ವದ ವಿರುದ್ಧ ಸಮರ ಸಾರಿದ ಶಿವಸೇನೆ..

ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಶಿವಸೇನೆ ಅಖಾಡಕ್ಕಿಳಿದಿದೆ.‌ ‌21 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆಯನ್ನು ಶಿವಸೇನೆ ನಾಯಕರಾದ ಸುರೇಶ್ ಲಾಂಡಗೆ, ಹಾಗೂ ಪ್ರಮೋದ ಮುತಾಲಿಕ, ಆಂದೋಲದ ಸಿದ್ಧಲಿಂಗ ಸ್ವಾಮಿ ಬಿಡುಗಡೆ ಮಾಡಿ ಏಲೆಕ್ಷನ್ ಕಹಳೆ ಮೊಳಗಿಸಿದ್ದಾರೆ. ‌

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದುತ್ವದ ವಿಚಾರವನ್ನಿಟ್ಟುಕೊಂಡು ಶಿವಸೇನೆ ರಾಜ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆ. ಅಲ್ಲದೆ
ಬಿಜೆಪಿಯ ಡೋಂಗಿ ಹಿಂದುತ್ವ ಹೋಗಲಾಡಿಸಲು ಈ ಸ್ಪರ್ಧೆ ಮಾಡುತ್ತಿದ್ದವೆ ಎಂದು‌ ಆರೋಪಿಸಿದ್ದಾರೆ.

ಬಿಜೆಪಿ ಒಂದೆಡೆ ಹಿಂದುತ್ವ ಅನ್ನುತ್ತೆ,ಇನ್ನೊಂದೆಡೆ ಅಭಿವೃಧಿ ಎನ್ನುತ್ತೆ. ಆದ್ರೆ 2008 ರಲ್ಲಿ ಬಿಜೆಪಿ ಅಧಿಕಾರ ಸಿಕ್ಕಾಗ ಎರಡೂ ಮಾಡಲಿಲ್ಲ ಎಂದು ಆರೋಪಿಸಿದ್ರು. ಇನ್ನು ಕಾಂಗ್ರೆಸ್ ಕೂಡಾ ತನ್ನ ಅಧಿಕಾರವಧಿಯಲ್ಲಿ 21 ಹಿಂದೂ ಕಾರ್ಯಕರ್ತರ ಕೊಲೆಯಾದ್ರು ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದದ್ರು.

ಕರ್ನಾಟಕದ ಶಿವಸೇನೆಗೆ ಹಲವು ಮಠಾಧೀಶರ ಬೆಂಬಲವೂ ಇದೆ. ಒಟ್ಟು ಈ ಭಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 60 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ಇನ್ನು ಕೆಲವೇ‌ ದಿನಗಳಲ್ಲಿ ಎರಡನೇ ಪಟ್ಟಿ ರೀಲಿಸ್ ‌ಮಾಡುತ್ತೇವೆ. ಎರಡನೇ ಪಟ್ಟಿಯಲ್ಲಿ ಪ್ರಮೋದ್ ಮುತಾಲಿಕ್ ಹೆಸರು ಕೂಡಾ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಮೊದಲ ‌ಪಟ್ಟಿ ಅಭ್ಯರ್ಥಿಗಳು.ಅಲ್ಲದೆ ರಾಜ್ಯದಲ್ಲಿ ಜೆಸಿಬಿ ಪಕ್ಷಗಳನ್ನ ಕಿತ್ತೊಗೆಯುವದೆ ನಮ್ಮ ಕೆಲಸವೆಂದ್ರು. ಇನ್ನು ಅಭ್ಯರ್ಥಿಗಳನ್ನ ನೋಡೋದಾದ್ರೆ

ಜೇವರ್ಗಿ : ಸಿದ್ಧಲಿಂಗ ಸ್ವಾಮಿ.
ಕಲಘಟಗಿ : ಈರಣ್ಣ ಕಾಳೆ.
ಹು-ಧಾ ಸೆಂಟ್ರಲ್‌ : ಕುಮಾರ ಹಕಾರೆ.
ಧಾರವಾಡ :ಈಶ್ವರಗೌಡ ಪಾಟೀಲ್.
ಯಾದಗಿರಿ: ವಿಜಯ್ ಪಾಟೀಲ್.
ನರಗುಂದ : ದಾನಪ್ಪಗೌಡರ್ ‌ಹಾಸನ: ಹೆಮಂತ್ ಜಾನಕೇರಿ.
ಶೃಂಗೇರಿ: ಮಹೇಶ್ .
ಉಡುಪಿ: ಮಧುಕರ್ .
ಮಂಗಳೂರು: ಆನಂದ ಶೆಟ್ಟಿ.
ಹೆಬ್ಬಾಳ: ಟಿ.ಜಯಕುಮಾರ್ .
ತಿಪಟುರು: ಸಂತೋಷಕುಮಾರ್ .
ಕನಕಗಿರಿ ಮೀಸಲು: ಕೆ.ಬಾಲಪ್ಪ.
ಹುನುಗುಂದ : ಪ್ರದೀಪ.
ಜಮಖಂಡಿ: ವಾಸುದೇವ್ ಪಾರಸ್ .
ಸುರುಪುರ: ರಾಜಪ್ಪ ಬಿಡ್ಡಾನಾಯಕ್ .

ಸೇರಿದಂತೆ ೨೧ ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ರು. ಅಲ್ಲದೆ ಎಲ್ಲಾ ೨೧ ಅಭ್ಯರ್ಥಿಗಳು ಕೂಡಾ ಸುದ್ದಿಗೋಷ್ಟಿ ಯಲ್ಲಿದ್ದು ಬಲಪ್ರದರ್ಶನ ಮಾಡಿದ್ದು, ವಿಶೇಷವಾಗಿತ್ತು.

ವರದಿ:  ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..

Avail Great Discounts on Amazon Today click here