ಹಿಂದುತ್ವದ ಕಾರ್ಯಕರ್ತರ ದಮನ ನೀತಿ !! ಹಸನಬ್ಬ ಕೊಲೆಯ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿದ್ದಿಷ್ಟು !!

ದನಗಳ ಕಳವು ಮಾಡುತ್ತಿದ್ದ ವೇಳೆ ಹಿಡಿದುಕೊಟ್ಟ ವ್ಯಕ್ತಿ ಪೊಲೀಸ್ ಜೀಪಿನಲ್ಲೇ ಸಾವನ್ನಪ್ಪಿದ್ದರೂ ಅದನ್ನು ಬಿಜೆಪಿ ಹಾಗೂ ಸಂಘ ಪರಿವಾರದ ತಲೆಗೆ ಕಟ್ಟುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಡುಪಿ, ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ದನಗಳ ಕಳವು ನಡೆಯುತ್ತಿತ್ತು. ಸ್ಕಾರ್ಪಿಯೋ ಒಂದು ಪ್ರತಿ‌ದಿನ ರಾತ್ರಿ ಸಂಚರಿಸುತ್ತಿದ್ದು ದನ ಕಳವು ಮಾಡುತ್ತಿದೆ ಎನ್ನುವ ಮಾಹಿತಿಯನ್ನು ನಮ್ಮ ಕಾರ್ಯಕರ್ತರು ಪೊಲೀಸ್ ಗೆ ನೀಡಿದ್ದರು. ಅದರಂತೆ ಮಧ್ಯರಾತ್ರಿ ಪೊಲೀಸ್ ಜೀಪ್ ಬಂದಿದ್ದು ನೋಡಿ ಚಾಲಕ ಜೀಪನ್ನು ಹಿಂದಕ್ಕೆ‌ ತೆಗೆಯುವ ಯತ್ನದಲ್ಲಿ ಅಪಘಾತಕ್ಕೀಡಾಯಿತು. ಅದರಲ್ಲಿ 15 ದನಗಳು‌ ಇದ್ದವು. ಜೀಪಿನಲ್ಲಿದ್ದ ಮೂವರು ಪರಾರಿಯಾದರು.ಆದರೆ ಹಸನಬ್ಬ ಎನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು. ಆತನನ್ನು ಪೊಲೀಸ್ ಜೀಪ್ ನಲ್ಲಿ ಠಾಣೆಗೆ ಕರೆತರುವ ವೇಳೆಗೆ ಸತ್ತಿದ್ದ. ಹೃದಯಾಘಾತದಿಂದ ಸತ್ತಿದ್ದ. ಆದರೆ ಇದನ್ನ ಬಿಜೆಪಿ, ಸಂಘಪರಿವಾರದ ಮೇಲೆ ಕಟ್ಟುವ ಷಡ್ಯಂತ್ರ ಮಾಡುತ್ತಿದೆ. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮುನ್ನವೇ ನಮ್ಮ ಏಳು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲಿನ ಮೂವರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ವೇಳೆ ಮಾಡುತ್ತಿದ್ದ ಕೆಲಸವನ್ನೇ ಈಗ ಸಮ್ಮಿಶ್ರ ಸರ್ಕಾರ ಮಾಡಿತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬಸ್ ಪಾಸ್ ನಲ್ಲಿ ಈಗ ತಾರತಮ್ಯ ಮಾಡಲು ಶುರಮಾಡಿದೆ, ಶಾಲೆಗೆ ಹೋಗುವ ಮಕ್ಕಳಲ್ಲೂ ಜಾತಿ ಹುಡುಕಾಟ ಮಾಡುತ್ತಿದೆ, ಜಾತಿ ಆಧಾರದಲ್ಲಿ‌ ಬಸ್ ಪಾಸ್ ವಿತರಣೆಯ ಅಗತ್ಯವೇನು, ನಾವು ಉಚಿತ ಸೈಕಲ್,ಉಚಿತ ಬಸ್ ಪಾಸ್ ಎಲ್ಲಾ ಮಕ್ಕಳಿಗೆ ಕೊಟ್ಟೆವು,ಆದರೆ ಇವರು ಜಾತಿ ತಾರತಮ್ಯ ಮಾಡುತ್ತಿದ್ದಾರೆ, ಕಳೆದ ಸರ್ಕಾರ ಜಾತಿ ಆಧಾರದಲ್ಲಿ ಪ್ರವಾಸ ಯೋಜನೆ ತಂದರೆ, ಈ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂತಾದ ಹೋಗಿ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವಲ್ಲಿಯೂ ಜಾತಿಯತೆ ಮಾಡುತ್ತಿದ್ದಾರೆ.ತಕ್ಷಣ ಈ ಕಾನೂನು ವಾಪಸ್ ಒಡೆದು ಎಲ್ಲಾ ಮಕ್ಕಳಿಗೂ ಉಚಿತ ಪಾಸ್ ನೀಡುವಂತೆ ಆಗ್ರಹಿಸಿದರು.

ಹಾಲಿಗೆ ನೀಡುವ ಪ್ರೋತ್ಸಾಹ ಧನದಲ್ಲಿ 2 ರೂ.ಕಡಿಮೆ ಮಾಡುವ ಹೇಳಿಕೆಯನ್ನು ಸಿಎಂ ನೀಡಿದ್ದಾರೆ. ಅಧಿಕಾಕ್ಕೆ ಬಂದ ತಕ್ಷಣ ನಿಮಗೆ ರೈತರ ಮೇಲೇಕೆ‌ ಸಿಟ್ಟು,24 ಗಂಟೆಯಲ್ಲಿ ಸಾಲಮನ್ನಾ ಎಂದು ಹೇಳಿ ಕೈ ಕಟ್ಟಿದಿರಿ, ನಾವು ಬಂದ್ ಎಂದ‌ ಕೂಡಲೇ ರೈತರ ಸಭೆ ಕರೆದಿರಿ ಆದರೆ ಇನ್ನೂ ಯಾವ ಕ್ರಮ ಕೈಗೊಂಡಿಲ್ಲ. ಅದರ ಬೆನ್ನಲ್ಲೇ ರೈತರಿಗೆ ಮತ್ತೊಂದು ಬರೆ ಎಳೆಯುತ್ತಿದ್ದೀರಿ. ಪ್ರೋತ್ಸಾಹ ಧನದಿಂದ‌ ಹಾಲಿನ ಉತ್ಪಾದನೆ ಹೆಚ್ಚಳವಾಗಿತ್ತು,ಈಗ ಅದನ್ನು ನಿಲ್ಲಿಸಲು ಹೊರಟಿದ್ದಾರೆ. ಯಾವ ಕಾರಣಕ್ಕೆ ಇದನ್ನು ಮಾಡಲು ಹೊರಟಿದ್ದೀರಿ? ಇದು ಜಾರಿಯಾಗಬಾರದು, ಹಿಂದಿನ ಸರ್ಕಾರ ನೀಡುತ್ತಿದ್ದ ರೀತಿಯಲ್ಲಿಯೇ ಪ್ರೋತ್ಸಾಹ ಧನ ಮುಂದುವರೆಯಬೇಕು ಮತ್ತು ಸಕಾಲದಲ್ಲಿ ರೈತರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ತಿಂಗಳು‌ ರೆಸಾರ್ಟ್ ರಾಜಕಾರಣ,ದೆಹಲಿ ರಾಜಕಾರಣ ನಡೆಯಿತು. ಅದರ ನಡುವೆ 15 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡುವ, ಸಾಂತ್ವಾನ ಹೇಳುವ ಕೆಲಸವನ್ನು ಇವರು ಮಾಡಿಲ್ಲ, ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದೇ ದಿನ ದಾಖಲೆ‌ ಮಳೆಯಾಗಿ ನೆರೆ, ಪ್ರವಾಹ ಬಂತು,ಜನ ಪ್ರಾಣ ಕಳೆದುಕೊಂಡರು,ಆದರೆ ಸರ್ಕಾರ ಬದುಕಿದೆ ಎಂದು ತೋರಿಸಲೇ ಇಲ್ಲ, ಸಾಂತ್ವಾನ ಹೇಳಲಿಲ್ಲ, ಅಧಿಕಾರಿಗಳೂ‌ ಕೂಡ ಅಲ್ಲಿಗೆ ಹೋಗಲಿಲ್ಲ, ಒಂದು ರೀತಿಯ ತಾರತಮ್ಯದ ಆಡಳಿತ ನಡೆಸುತ್ತಿದೆ. ಬಿಜೆಪಿ‌ ಹೆಚ್ಚು ಸ್ಥಾನ ಗೆದ್ದ ಜಿಲ್ಲೆಗಳನ್ನು ಕಡೆಗಣಿಸುವ ಕೆಲಸ‌ವನ್ನು ಈ ಸಮ್ಮಿಶ್ರ ಸರ್ಕಾರ ಮಾಡುತ್ತಿದ್ದಾರೆ.

ಸಿಎಂ, ಡಿಸಿಎಂ ಸಾಂತ್ವಾನ ಹೇಳಲಿಲ್ಲ, ನೀವು ಬರೀ ಖಾತೆ ಹಂಚಿಕೆ ಚರ್ಚೆ ಮಾಡಿದಿರಿ ಜನರ ಕಷ್ಟ ಕೇಳುವ ಕನಿಷ್ಟ ಕೆಲಸ‌ ಮಾಡಲಿಲ್ಲ.ಇನ್ನಾದರೂ‌ ಜನರ ರಕ್ಷಣೆ,ಕಾನೂನು‌ ಸುವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಿ ಎಂದರು.

ದಕ್ಷಿಣ ಕನ್ನಡ ಹಾಗು ಉಡುಪಿಯಲ್ಲಿ ಪರಿಹಾರ ಕಾರ್ಯಾಚರಣೆ ಮಾಡಿದ್ದೇವೆ ಎಂದು ಸಿಎಂ ಹೇಳುತ್ತಾರೆ. ಹಾಗಾದರೆ ನೀವು ಏನು ಕೆಲಸ ಮಾಡಿದ್ದೀರಿ‌ ಹೇಳಿ, ಹಣ ಎಲ್ಲಿಗೆ ತಲುಪಿಸಿದಿರಿ, ಯಾರಿಗೆ ಕೊಟ್ಟಿರಿ, ಎಷ್ಟು ಜನರಿಗೆ ಪರಿಹಾರ ಕೊಡಲಾಗಿದೆ ಮಾಹಿತಿ ನೀಡಿ, ನಾನು ಅಲ್ಲಿನ ಎಂಪಿ ನನಗೆ ಮಾಹಿತಿ ನೀಡಿ, ರಾಜ್ಯ ಸರ್ಕಾರ ಪರಿಹಾರ ರೂಪದಲ್ಲಿ ಏನು ಕೊಟ್ಟಿದೆ ಲೆಕ್ಕ ಕೊಡಿ ಎಂದರು.

ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದೇ ಇಲ್ಲ ಎನ್ನುವ ಕಾಲದಲ್ಲಿಯೂ ಶಿಕ್ಷಕ‌ರ ಮತ್ತು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಯಾವುದೇ ಆಮಿಷಕ್ಕೆ‌ ಒಳಗಾಗಲ್ಲ ಎಂದು ಸಾಬೀತುಪಡಿಸಿದ್ದಾರೆ.ಆದರೆ ಜೆಡಿಎಸ್ ಅಭ್ಯರ್ಥಿ ಭೋಜೇಗೌಡರ ಪರವಾಗಿ ಪ್ರಾಂಶುಪಾಲ ಧರ್ಮಪ್ಪ ಹಣದ ಆಮಿಷ ಒಡ್ಡಲು ಹೋಗಿ ಸಿಕ್ಕಿಹಾಕಿಕೊಂಡಿರುವು ಈ ಸರ್ಕಾರ ಯಾವ ರೀತಿ ಭ್ರಷ್ಟಾಚಾರವನ್ನು ಶಿಕ್ಷಕರ ಮಟ್ಟಕ್ಕೆ ಇಳಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.

ಜೆಡಿಎಸ್ ಕೀಳಮಟ್ಟಕ್ಕೆ‌ ಇಳಿದಿದೆ ಎನ್ನುವುದಕ್ಕೆ ಇದು ನಿದರ್ಶನ,ಭ್ರಷ್ಟಾಚಾರ ರಹಿತ ಆಡಳಿತ, ವೆಚ್ಚ ಕಡತ ಎನ್‌ಉವ ಸಿಎಂ ನಿಮ್ಮ ಅಭ್ಯರ್ಥಿಗಳು ಹಣದ ಆಮಿಷ ಒಡ್ಡುತ್ತಿದ್ದಾರೆ ಇದಕ್ಕೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು‌ ಪ್ರಶ್ನಿಸಿದರು. ಭ್ರಷ್ಟಾಚಾರ ಮಾಡಿತ್ತಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ಇತ್ತ ಗಮನ ಹರಿಸಬೇಕು ಎಂದರು.