ನಿಮಗೆ ಹುಡುಗಿಯರ ಶಾಪ ತಟ್ಟದೇ ಇರಲ್ಲ !! ಬಿಎಸ್ ವೈ ಗೆ ಶೋಭಾ ಪತ್ರ !!

Shobha Vinay wrote a Letter to BIP State President BSY.

ಬಿಜೆಪಿ ಮುಖಂಡ ವಿನಯ್​​​ ಅಪಹರಣ ಯತ್ನ ಪ್ರಕರಣ ಸಧ್ಯಕ್ಕೆ ಮುಕ್ತಾಯವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೌದು ತನ್ನ ಪತಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಬೇಕು. ನೀವು ರಾಜ್ಯ ನಾಯಕರಾಗಿ, ಮಾಜಿ ಮುಖ್ಯಮಂತ್ರಿಗಳಾಗಿ, ಸಂತೋಷ ಬೆಂಬಲಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ವಿನಯ್ ಪತ್ನಿ ಶೋಭಾವಿನಯ್​ ಬಿ.ಎಸ್​.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು, ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಇದೇ ರೀತಿ ಸಂಕಷ್ಟ ಬಂದಿದ್ದರೇ ನೀವು ಹೀಗೆ ವರ್ತಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡುವ ಸಂಚಲನ ಸೃಷ್ಟಿಸಿದ್ದಾರೆ.

ವೃತ್ತಿಯಲ್ಲಿ ಉಪನ್ಯಾಸಕಿಯಾಗಿರುವ ಶೋಭಾವಿನಯ್​, ಸುಮಾರು ಮೂಠು ಪುಟಗಳ ಪತ್ರ ಬರೆದಿದ್ದು, ಪತ್ರದಲ್ಲಿ ನಾನು ನನ್ನ ಪತಿ, ಅವಳಿ ಹೆಣ್ಣುಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಆದರೇ ನಿಮ್ಮೊಂದಿಗಿರುವ ಕ್ರಿಮಿನಲ್ ವ್ಯಕ್ತಿ ಸಂತೋಷ ನಮ್ಮ ಮನೆಯವರನ್ನು ಅಣ್ಣ, ಅಣ್ಣ ಎಂದು ಕರೆಯುತ್ತಾ ಕೊನೆಗೆ ನಮ್ಮ ಬದುಕಿಗೆ ಮುಳುವಾಗಿದ್ದಾನೆ. ಬಿಎಸ್​ವೈಯವರೇ ನಿಮಗೂ 3 ಜನ ಹೆಣ್ಣುಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರಿದ್ದು, ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ರೀತಿಯ ಸ್ಥಿತಿ ಬಂದಿದ್ದರೇ ಏನು ಮಾಡ್ತೀರಿ? ಎಂದು ಪ್ರಶ್ನಿಸಿದ್ದಾರೆ.

 

 

 

ಅಲ್ಲದೇ ನೀವು ಸಂತೋಷ ರಕ್ಷಿಸುತ್ತಿದ್ದೀರಿ, ರಾಜಕೀಯ ಪ್ರಭಾವ ಬೀರುತ್ತಿದ್ದೀರಿ. ಒಂದೊಮ್ಮೆ ನಿಮ್ಮ ಬೆಂಬಲಿಗ ಸಂತೋಷ ಕಡೆಯವರು ನನ್ನ ಗಂಡನನ್ನು ಸಾಯಿಸಿದ್ರೆ ನಾನು ಇಬ್ಬರು ಮಕ್ಕಳ ಜೊತೆ ಎಲ್ಲಿಗೆ ಹೋಗಲಿ ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.

ಅಲ್ಲದೇ ನಿಮ್ಮಂತೆ 5-6 ಲಾಯರ್ ಇಟ್ಟು ಕೇಸ್ ನಡೆಸಲು ನಮಗೆ ಶಕ್ತಿ ಇಲ್ಲ. ಇದನ್ನು ನಾನು ದೇವರಿಗೆ ಬಿಡುತ್ತೇನೆ. ದೇವರೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಿ ಎಂದಿರುವ ಶೋಭಾ ಪತ್ರದ ಯಥಾಪ್ರತಿಯನ್ನು, ಧರ್ಮಸ್ಥಳ ಮಂಜುನಾಥ ಸ್ವಾಮಿ, ಮೈಸೂರು ಚಾಮುಂಡೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ, ಶಿರಡಿ ಸಾಯಿಬಾಬಾ, ಪ್ರಧಾನಿ, ಮಹಿಳಾ ಸಂಸದರು ಸೇರಿ ಹಲವರಿಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಎಲೆಕ್ಷನ್​ ಎದುರು ಬಿಜೆಪಿಗೆ ಸ್ವಪಕ್ಷಿಯರೇ ಮುಳುವಾಗಿದ್ದು, ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ತಮ್ಮ ಪಕ್ಷದ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೆ ಕಾದು ನೋಡಬೇಕಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here