ಗುರುರಾಯರ ಸನ್ನಿಧಿಯಲ್ಲಿ ಪುಣ್ಯಸ್ನಾನ ಮಾಡಲೆಬೇಕೆಂಬ ಹಂಬಲವೆ? ನಿಮಗೆ ಕಾದಿದೆ ಶಾಕ್!

ಗುರು ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಅಲ್ಲಿನ ತುಂಗಭದ್ರಾ ನದಿ ಸ್ನಾನ ಅತ್ಯಂತ ಪವಿತ್ರವಾದದ್ದು. ಆದರೇ ಇತ್ತೀಚಿನ ದಿನಗಳಲ್ಲಿ ಮಂತ್ರಾಲಯಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತಸಾಗರ ಹರಿದುಬರುತ್ತಿದ್ದರೂ, ಭಕ್ತರು ಪುಣ್ಯಸ್ನಾನದಿಂದ ವಂಚಿತರಾಗುತ್ತಿದ್ದಾರೆ. ಕಾರಣ ನೀರಿನ ಕೊರತೆ.

ಮಂತ್ರಾಲಯಕ್ಕೆ ಬರುವ ಭಕ್ತರಿಗೆ ರಾಯರ ದರ್ಶನದಷ್ಟೇ ಮುಖ್ಯವಾಗಿರೋದು ಪವಿತ್ರ ಸ್ನಾನ. ಆದರೇ ತುಂಗಭದ್ರಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿರೋದರಿಂದ ಜನರಿಗೆ ಪುಣ್ಯಸ್ನಾನದ ಅವಕಾಶ ಸಿಗುತ್ತಿಲ್ಲ. ಈ ಭಾರಿ ಅತಿಯಾದ ಬೇಸಿಗೆಯಿಂದ ನೀರು ಪೂರ್ತಿ ಆರಿ ಹೋಗಿದ್ದು, ಎಲ್ಲೆಲ್ಲಿಂದಲೋ ಬರುವ ಭಕ್ತರು ನದಿಸ್ನಾನ ಮಾಡಲಾಗದೇ ಬೇಸರಗೊಳ್ಳುವಂತಾಗಿದೆ.