ಬೆಂಗಳೂರಿಗೆ ಕಾದಿದೆ ಜಲಕ್ಷಾಮ- ವರದಿಯಲ್ಲಿ ಬಹಿರಂಗವಾಯ್ತು ಆತಂಕಕಾರಿ ಅಂಶ!!

ಪ್ರತಿನಿತ್ಯ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತಿರುವ ಬೆಂಗಳೂರಿಗರಿಗೇ ಶಾಕ್​ ಕಾದಿದೆ.

ಹೌದು ಸಧ್ಯದಲ್ಲೇ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗಲಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಿಸಲಿರುವ 11 ಟಾಪ್​ ನಗರದಲ್ಲಿ ಬೆಂಗಳೂರಿಗೆ 2 ನೇ ಸ್ಥಾನ ಲಭ್ಯವಾಗಿದೆ. ಹೌದು ವಿಶ್ವಜಲಸಂಪನ್ಮೂಲ ಅಭಿವೃದ್ಧಿ ವರದಿಯಲ್ಲಿ ಇಂತಹದೊಂದು ಶಾಕಿಂಗ್​​ ಅಂಶ ಬೆಳಕಿಗೆ ಬಂದಿದ್ದು, ಇದು ಬೆಂಗಳೂರಿನ ಪಾಲಿಗೆ ನಿಜಕ್ಕೂ ಶಾಕಿಂಗ್​ ಸಂಗತಿ. ಈ ವರದಿಯ ಪ್ರಕಾರ ಬ್ರೆಜಿಲ್​ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರಿನ ನಂತರದ ಸ್ಥಾನದಲ್ಲಿ ಚೀನಾದ ರಾಜಧಾನಿ ಬೀಜಿಂಗ್​​​ ಇದೆ.

 

ಇದು ಇನ್ನೇನು ಬೇಸಿಗೆಯ ಹೊಸ್ತಿಲಲ್ಲಿರುವ ಸಿಲಿಕಾನ ಸಿಟಿಯ ಜನರಿಗೆ ನಿಜಕ್ಕೂ ಶಾಕಿಂಗ್​ ನ್ಯೂಸ್​ ಆಗಿದ್ದು, ಜಲಮಂಡಳಿಯ ಪಾಲಿಗಂತೂ ಬೆಚ್ಚಿಬೀಳಿಸುವ ಮಾಹಿತಿ. ಯಾಕಂದ್ರೇ ಬೆಂಗಳೂರಿಗೆ ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರಿನ ಅಗತ್ಯವಿದೆ. ಇದನ್ನು ಪೊರೈಸಲು ಜಲಮಂಡಳಿ ಈಗಾಗಲೇ ಪರದಾಡುತ್ತಿದೆ. ಇನ್ನು ಈ ವರ್ಷವೂ ನೀರಿನ ಕೊರತೆ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಬೆನ್ನಲ್ಲೇ ಇದೀಗ ವರದಿ ಹೊರಬಂದಿರೋದು ಬೆಂಗಳೂರಿನಲ್ಲಿ ಆತಂಕ ಮೂಡಿಸಿದೆ.