SHOCKING NEWS – ಪಾರ್ಕಿಂಗ್ ಜಾಗವಿಲ್ಲದಿದ್ದರೆ ಕಾರು ಖರೀದಿಸುವಂತಿಲ್ಲ !! ಹೊಸ ಕಾರು ಖರೀದಿಗೆ ಹೊಸ ಕಾಯ್ದೆ !!

ಇನ್ನು‌ ಮುಂದೆ ಬೇಕಾಬಿಟ್ಟಿ ಕಾರು ತಗೊಳ್ಳುವಂತಿಲ್ಲ. ನಿಮ್ಮ ಕಾರು ನೊಂದಣಿಯಾಗಬೇಕಾದರೆ ಮನೆ ಮುಂದೆ ಪಾರ್ಕಿಂಗ್ ಗೆ ಜಾಗ ಇದೆ ಎಂದು ನೊಂದಣಿ ಅಧಿಕಾರಿಗಳಿಗೆ ಖಾತ್ರಿಯಾಗಬೇಕು.

ad

ಹೌದು. ಇಂತಹುದೊಂದು ಕಾಯ್ದೆ ತರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಮನೆ ಮುಂದೆ ಕಾರ್ ಪಾರ್ಕಿಂಗ್ ಗೆ ಜಾಗ ಇದ್ರೆ ಮಾತ್ರ ನೋಂದಣಿ. ಪಾರ್ಕಿಂಗ್ ಗೆ ಜಾಗ ಇಲ್ಲದಿದ್ದರೆ ಕಾರು ನೋಂದಣಿಗೆ ಅವಕಾಶ ಇಲ್ಲ. ಇಂತಹ ನಿಯಮ ತರಲು ಚಿಂತನೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ಬೆಂಗಳೂರಿನಲ್ಲಿ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಇಂತಹ ನಿಯಮ ತರಲು ಚಿಂತನೆ. ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ನಿಯಮ ರೂಪಿಸ್ತೇವೆ. ಮನೆ ಮುಂದೆ ಪಾರ್ಕಿಂಗ್ ಜಾಗ ಇದ್ರೆ ಮಾತ್ರ ಕಾರ್ ನೊಂದಣಿಗೆ ಅವಕಾಶ ನೀಡುವಂತಹ ಕಾಯ್ದೆ ತರುತ್ತೇವೆ ಎಂದಿದ್ದಾರೆ.