ಕಾಂಗ್ರೆಸ್ ಪಕ್ಷವನ್ನು ಹಳ್ಳ ಹಿಡಿಸಿದ್ದ 2ಜಿ ಸ್ಪೆಕ್ಟ್ರಂ ಬಹುಕೋಟಿ ಹಗರಣ ಹಳ್ಳಹಿಡಿಯಲು ಕಾರಣಗಳೇನು ?

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತೀರ್ಪು ಹೊರಬಿದ್ದ ದಿನವೇ 2-ಜಿ ಬಹುಕೋಟಿ ಹಗರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ.

ಕಾನೂನು ಅಧಿಕಾರಿಗಳಿಂದಲೇ ಕೇಸ್​ ಹಳ್ಳ ಹಿಡಿಸೋ ಯತ್ನ ನಡೆದಿದೆ ಅನ್ನೋ ಅನುಮಾನ ಸರ್ಕಾರದ ಮೂಲಗಳಿಂದಲೇ ಕೇಳಿ ಬರ್ತಿದೆ. ಪ್ರಕರಣದಲ್ಲಿ ಬಲವಾದ ಸಾಕ್ಷಿ ಒದಗಿಸುವ ಮತ್ತು ಕಾನೂನು ವಾದ ಮಾಡುವ ಹಂತದಲ್ಲಿ ಲೋಪ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ನಿನ್ನೆಯಷ್ಟೇ ದೆಹಲಿ ಪಟಿಯಾಲದ ಸಿಬಿಐ ವಿಶೇಷ ಕೋರ್ಟ್​ ಎ.ರಾಜಾ ಮತ್ತು ಕನ್ನಿಮೋಳಿಯನ್ನು ದೋಷಮುಕ್ತಗೊಳಿಸಿತ್ತು. ಸಾಕ್ಷಿ ಕೊರತೆ ಹಿನ್ನೆಲೆಯಲ್ಲಿ ನಿರ್ದೋಷಿಗಳೆಂದು ಕೋರ್ಟ್ ಆದೇಶ ಕೊಟ್ಟಿತ್ತು.

 

 ಈ ಮಧ್ಯೆ ಇವತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್​​ ನೇತೃತ್ವದಲ್ಲಿ ಕಾಂಗ್ರೆಸ್​ ಸಿಡಬ್ಲ್ಯುಸಿ ಮೀಟಿಂಗ್​​​ ನಡೆಯಲಿದೆ. ಈ ಮೀಟಿಂಗ್​ನಲ್ಲಿ 2-ಜಿ ತರಂಗಾಂತರ ಪ್ರಕರಣದ ಚರ್ಚೆ ಮಾಡಿ ಇಂದು ಸಂಸತ್​ ಅಧಿವೇಶನದಲ್ಲಿ ಹೋರಾಟ ನಡೆಸಲು ತೀರ್ಮಾನಿಸುವ ಸಾಧ್ಯತೆ ಇದೆ. ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, 2 ಜಿ ಸ್ಪ್ರೆಕ್ಟಂ ಬಹುಕೋಟಿ ಹಗರಣದ ಮೂಲಕ ಕಾಂಗ್ರೆಸ್ ಗೆ ಮಸಿ ಬಳಿಯಾಲಾಗಿತ್ತು. ಇವತ್ತಿಗೂ ಆ ಡ್ಯಾಮೇಜ್ ಹಾಗೇ ಉಳ್ಕೊಂಡಿದೆ. ಅವತ್ತು ಹಗರಣದ ಬಗ್ಗೆ ವರದಿ ನೀಡಿದ್ದ ಅಧಿಕಾರಿಗೆ ನರೇಂದ್ರ ಮೋದಿ ಸರಕಾರದಲ್ಲಿ ಪದ್ಮಭೂಷಣ ನೀಡಲಾಗಿತ್ತು. ಈಗ ನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಿದೆ ಎಂದರು.