ಸೊಲ್ಲಾಪುರದಲ್ಲಿ ಭೀಕರ ಅಪಘಾತ : 7 ಸಾವು

ಮಹಾರಾಷ್ಟ್ರದ ಸೊಲ್ಲಾಪುರನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 7 ಮಂದಿ ಸಾವನ್ನಪ್ಪಿ, 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೊಲ್ಲಾಪುರದ ತುಲಜಾಪುರದ ಘಾಟ್​ನಲ್ಲಿ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನ ಒಸ್ಮನಾಮಾಬಾದ್​​ನ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ  ಟ್ಯಾಂಕರ್​ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ.

sholapur accident

ಸಾವನ್ನಪ್ಪಿರುವವರಲ್ಲಿ ಮಕ್ಕಳೆ ಹೆಚ್ಚಾಗಿದ್ದಾರೆ ಎನ್ನಲಾಗ್ತಿದೆ. ಟ್ಯಾಂಕರ್ ಚಾಲಕ , ವಾಹನ ನಿಯಂತ್ರಣ ಕಳೆದು ಕೊಂಡಿದ್ದು ದುರ್ಘಟನೆಗೆ ಕಾರಣ ಎನ್ನಲಾಗಿದೆ.  ಈ ಸಂಬಂಧ ಒಸ್ಮನಾಮಾಬಾದ್​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.