ಒಟ್ಟೊಟ್ಟಿಗೆ ಚಿತ್ರೀಕರಣವಾಗಲಿದೆ ಕಿಚ್ಚನ ಕೋಟಿಗೊಬ್ಬ ಹಾಗೂ ಪೈಲ್ವಾನ್​- ಶೂಟಿಂಗ್ ಎಲ್ಲಿ ಗೊತ್ತಾ?!

ಸುದೀಪ್​​ ಅಭಿನಯದ ಸಿನಿಮಾಗಳು ತೆರೆಕಂಡು ಒಂದು ವರ್ಷ ಕಳೆದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹೆಬ್ಬುಲಿ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಕಿಚ್ಚ ದಿ ವಿಲನ್​ ಸಿನಿಮಾ ಮತ್ತು ಬಿಗ್​ಬಾಸ್​ ಕಾರ್ಯಕ್ರಮದಲ್ಲಿ ಬ್ಯುಸಿಯಾದ್ರು. ಇದೀಗ ರಿಲೀಸ್​​​ಗೆ ರೆಡಿಯಾಗ್ತಿರೋ ಸಿನಿಮಾ ಅಂದ್ರೆ ದಿ ವಿಲನ್​​.

ಹೌದು… ಇದೀಗ ಕಿಚ್ಚ ಡಬಲ್​​ ಪ್ಲ್ಯಾನ್​ ಮಾಡಿದ್ದಾರೆ. ದಿ ವಿಲನ್​​ ಶೂಟಿಂಗ್​ ಮುಗಿಸಿರೋ ಕಿಚ್ಚ ಅಂಬಿ ನಿಂಗೆ ವಯಸ್ಸಾಯ್ತು ಸಿನಿಮಾದಲ್ಲೂ ನಟಿಸ್ತಿದ್ದಾರೆ. ಈ ಮಧ್ಯೆ ಕಿಚ್ಚ ನಟನೆಯ ಕೋಟಿಗೊಬ್ಬ 3 ಮತ್ತು ಪೈಲ್ವಾನ್​ ಸಿನಿಮಾ ಕೂಡ ಸೆಟ್ಟೇರಿದೆ. ವಿಶೇಷ ಅಂದ್ರೆ ಈ ಎರಡೂ ಸಿನಿಮಾದ ಶೂಟಿಂಗ್​ ಒಟ್ಟೊಟ್ಟಿಗೆ ನಡೆಯುವಂತೆ ಕಿಚ್ಚ ಪ್ಲ್ಯಾನ್​ ಮಾಡಿದ್ದಾರೆ. ಕಿಚ್ಚ ಪೈಲ್ವಾನ್​ ಅವತಾರ ಎತ್ತೋಕೆ ಸಜ್ಜಾಗಿರೋದು ನಿಮ್ಗೂ ಗೊತ್ತಿರುತ್ತೆ. ಈಗಾಗ್ಲೇ ಚಿತ್ರದ ಫಸ್ಟ್​ಲುಕ್​​ಗೆ ಕಿಚ್ಚ ಕೊಟ್ಟಿರೋ ಖಡಕ್​ ಪೋಸ್​ ಎಲ್ಲರಿಗೂ ಇಷ್ಟ ಆಗಿದೆ. ಇತ್ತ ಸುದೀಪ್​ ಕೂಡ ಜಿಮ್​ಗೆ ಹೋಗಿ ದೇಹ ಹುರಿಗಟ್ಟಿಸಿದ್ದಾರೆ. ನಿರ್ದೇಶಕ ಕೃಷ್ಣ ಚಿತ್ರದ ಶೂಟಿಂಗ್​​ಗೆ ಬೇಕಾದ ಎಲ್ಲಾ ತಯಾರಿ ಮಾಡ್ಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದ್ರೆ ನೆಕ್ಸ್ಟ್​​ ವೀಕ್​ ಎಂಡ್​​ ಸಿನಿಮಾದ ಶೂಟಿಂಗ್​ ಶುರುವಾಗಲಿದೆ. ಅದ್ದೂರಿಯಾಗಿ ಇಡೀ ಸಿನಿಮಾವನ್ನು ಚಿತ್ರೀಕರಿಸುವ ಪ್ಲ್ಯಾನ್​ ಮಾಡಲಾಗಿದೆ.

‘ಕೋಟಿಗೊಬ್ಬ 3′ ಸಿನಿಮಾ ಕೂಡ ದೊಡ್ಡ ಮಟ್ಟದ ಟಾಕ್​ ಕ್ರಿಯೆಟ್ ಮಾಡಿದೆ. ಸಿನಿಮಾ ಸೆಟ್ಟೆರೋ ಮೊದಲೇ ಇನ್ನಿಲ್ಲದ ಹೈಪ್​​ ಕ್ರಿಯೆಟ್​​ ಮಾಡಿದೆ. ಸೂರಪ್ಪ ಬಾಬು ನಿರ್ಮಿಸಲಿರುವ ಕೋಟಿಗೊಬ್ಬ3’ ಸಿನಿಮಾಕ್ಕೆ ನವ ನಿರ್ದೇಶಕ ಕಾರ್ತಿಕ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಅಂದಹಾಗೆ ಕೋಟಿಗೊಬ್ಬ 3 ಸಿನಿಮಾದ ಪ್ರಿ ಪ್ರೊಡಕ್ಷನ್​​ ವರ್ಕ್ ತುಂಬಾ ಫಾಸ್ಟಾಗಿ ನಡೆಯುತ್ತಿದೆ. ಏಪ್ರಿಲ್​ 23ರಿಂದ ಸಿನಿಮಾದ ಶೂಟಿಂಗ್​ ಶುರುವಾಗಲಿದೆ. ಇದೀಗ ಸಿನಿಮಾ ಟೀಮ್​​ ಲೊಕೇಶನ್​​ಗಳ ಹುಡುಕಾಟ ನಡೆಯುತ್ತಿದೆ. ಮೊದಲ ಶೆಡ್ಯೂಲ್​ನಲ್ಲಿ ಬೆಂಗಳೂರಿನಲ್ಲಿ ಶೂಟಿಂಗ್​ ನಡೆಯಲಿದೆ. ಕೋಟಿಗೊಬ್ಬ 3 ಮತ್ತು ಪೈಲ್ವಾನ್​ ಸಿನಿಮಾದ ಮೊದಲ ಶೆಡ್ಯೂಲ್​ ಶೂಟಿಂಗ್​ ಬೆಂಗಳೂರಿನಲ್ಲೇ ನಡೆಯಲಿದೆ. ಕಿಚ್ಚ ಎರಡೂ ಸಿನಿಮಾಗಳ ಚಿತ್ರೀಕರಣವನ್ನು ಬ್ಯಾಲೆನ್ಸ್​ ಮಾಡಿಕೊಂಡು ಹೋಗಲಿದ್ದಾರೆ. ಎರಡೂ ಸಿನಿಮಾಗಳ ಮೊದಲ ಶೆಡ್ಯೂಲ್​​ ಮುಗಿದ ಬಳಿಕ ಕಿಚ್ಚ ಕೋಟಿಗೊಬ್ಬ ಸಿನಿಮಾದ ಚಿತ್ರೀಕರಣಕ್ಕೆ ಫಾರಿನ್​ ಪ್ಲೈಟ್​ ಹತ್ತಲಿದ್ದಾರೆ.

ಕೋಟಿಗೊಬ್ಬ 3 ಸಿನಿಮಾದ ಸೆಕೆಂಡ್​ ಹಾಫ್​ ಚಿತ್ರೀಕರಣ ಆಗೋದು ಸರ್ಬಿಯಾ ಕಂಟ್ರಿಯ ಬೆಲ್​ಗ್ರೇಡ್ ಸಿಟಿಯಲ್ಲಿ ಹೀಗಾಗಿ ಅಲ್ಲಿ ಸುಮಾರು 40 ದಿನಗಳ ಶೂಟಿಂಗ್​ ನಡೆಯಲಿದೆ. ಅದರಲ್ಲಿ 30 ದಿನ ಆ್ಯಕ್ಷನ್​ ಮತ್ತು ಚೇಸಿಂಗ್​ ಸೀಕ್ವೆನ್ಸ್​ಗಳ ಚಿತ್ರೀಕರಣವೇ ನಡೆಯಲಿದೆ. ಒಟ್ನಲ್ಲಿ ಕಿಚ್ಚನ ಎರಡೂ ಸಿನಿಮಾಗಳು ಕೂಡ ಒಟ್ಟೊಟ್ಟಿಗೆ ರೆಡಿಯಾಗಲಿದೆ. ಇದರಲ್ಲಿ ಒಂದು ಸಿನಿಮಾ ಇದೇ ವರ್ಷದ ಕೊನೆಯಲ್ಲಿ ತೆರೆಕಂಡ್ರೆ ಮತ್ತೊಂದು ಸಿನಿಮಾ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.