ತೆರವು ವಿರೋಧಿಸಿ ಅಂಗಡಿ ಮಾಲೀಕ ಆತ್ಮಹತ್ಯೆ ಹಿನ್ನೆಲೆ ಉತ್ತರ ಕನ್ನಡದ ಭಟ್ಕಳ ಪಟ್ಟಣದಲ್ಲಿ ಭಾರೀ ಪ್ರತಿಭಟನೆ ಟೈರ್​ಗೆ ಬೆಂಕಿ ಹಚ್ಚಿ ಭಟ್ಕಳ ಪುರಸಭೆಗೆ ನುಗ್ಗಲು ಯತ್ನ ಪರಿಸ್ಥಿತಿ ಉದ್ವಿಗ್ನ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ
=============

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಂಗಡಿ ತೆರವು ವೇಳೆ ಆತ್ಮಹತ್ಯೆ ಯತ್ನಿಸಿದ್ದ ಅಂಗಡಿ ಮಾಲೀಕ ಸಾವನ್ನಪ್ಪಿದ್ದಾನೆ. ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ 32 ವರ್ಷದ ರಾಮಚಂದ್ರ ನಾಗಪ್ಪ ನಾಯ್ಕ ಕೊನೆಯುಸಿರೆಳೆದಿದ್ದಾರೆ. ತೀವ್ರ ಸುಟ್ಟಗಾಯಗಳಿಂದ ಬಳಲ್ತಿದ್ದ ಅವ್ರನ್ನ ಮಣಿಪಾಲ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ‌ ಸಾವನ್ನಪ್ಪಿದ್ದಾರೆ. ಇನ್ನು, ಘಟನೆಯಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಸ್ಥಿತಿ ನಿಯಂತ್ರಿಸಲು 144 ಸೆಕ್ಸನ್​​ ಜಾರಿಗೊಳಿಸಲಾಗಿದೆ.

=============

ಇನ್ನು, ಇದಕ್ಕೂ ಮೊದಲು ತೆರವು ಕಾರ್ಯಾಚರಣೆ ವಿರೋಧಿಸಿ ಪುರಸಭೆ ಕಚೇರಿ ಮೇಲೆ ಕಲ್ಲು ತೂರಾಟ ಮಾಡಲಾಯ್ತು. ಉದ್ರಿಕ್ತರನ್ನ ತಡೆಯಲು‌ ಪೋಲೀಸರು ಹರಸಾಹಸ ಮಾಡಿದ್ರು. ಕಳೆದ ಐದು ದಿನದ ಹಿಂದೆ ಅಧಿಕಾರಿಗಳು ತೆರವಿಗೆ ಮುಂದಾಗಿದ್ರು. ಆದ್ರೆ, ಅಂಗಡಿಕಾರರ ವಿರೋಧಕ್ಕೆ ಮಣಿದ ಅಧಿಕಾರಿಗಳು ಐದು ದಿನಗಳ ಕಾಲಾವಕಾಶ ನೀಡಿ ಇವತ್ತು ತೆರವಿಗೆ ಮುಂದಾಗಿದ್ರು. ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್ ಪಿ ವಿರಕ್ತಮಠ, ಎಸಿ ತೆರವಿಗೆ ಮುಂದಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here