ನಾಡಿನೆಲ್ಲೆಡೆ ಕಳೆದ ತಿಂಗಳು ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಯ್ತು. ಆದ್ರೆ ಕೃಷ್ಣನೂರು ಉಡುಪಿಯಲ್ಲಿ ಮಾತ್ರ ಇಂದು ಮತ್ತು ನಾಳೆ ಶ್ರೀಕೃಷ್ಮಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಕಡೆಗೋಲು ಕೃಷ್ಣನ ಆರಾಧನೆಗೆ ರಥಬೀದಿ ಈಗಾಗಲೇ ಸಿದ್ಧವಾಗಿದ್ದು, ಇಂದು ಕೃಷ್ಣ ಜಯಂತಿ ಉತ್ಸವ ನಡೆದ್ರೆ, ನಾಳೆ ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ. ಭಕ್ತರಿಗೆ ಪ್ರಸಾದವಾಗಿ ಹಂಚುವುದಕ್ಕಾಗಿ ಉಂಡೆ-ಚಕ್ಕುಲಿ ಸಿದ್ಧಗೊಂಡಿದ್ದು, ಈ ಎರಡು ದಿನ ಉಡುಪಿ ನಂದಗೋಕುಲವಾಗಿ ಕಂಗೊಳಿಸಲಿದೆ. ಹರಿ ಭಕ್ತಿಯಲ್ಲಿ ಭಕ್ತಜನ ಮಿಂದೇಳಲಿದ್ದಾರೆ. ಇನ್ನು ಕೃಷ್ಣ ದೇವರ ಮಠದಲ್ಲಿ ಪರಂಪರಾಗತವಾಗಿ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸಿಕೊಂಡು ಬರಲಾಗ್ತಿದ್ದು, ಸೌರಮಾನದ ಸಿಂಹ ಮಾಸದ ಅಷ್ಟಮಿಯಂದೇ ಕೃಷ್ಣ ಜಯಂತಿಯನ್ನು ಆಚರಿಸುವ ಪದ್ಧತಿ ಇದೆ. ವಿಟ್ಲಪಿಂಡಿಯ ದಿನ ಭಕ್ತರು ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಹೊಡೆದು ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
========
ಬೈಟ್​: ರಘುರಾಮ ಆಚಾರ್ಯ,ಮಠದ ದಿವಾನರು, ಪರ್ಯಾಯ ಪೇಜಾವರ ಮಠ
ಬೈಟ್​​_ರಾಮಚಂದ್ರ ಭಟ್, ವಿದ್ವಾಂಸರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here