ನಟ ಕಮಲ್ ಹಾಸನ್, ಪ್ರಕಾಶ್ ರೈ ಮೂರ್ಖರು !!

ಖ್ಯಾತ ಚಿತ್ರ ನಟರಾಗಿರುವ ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ಮೂರ್ಖರು ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಜಂಗಮ ಪ್ರಾರ್ಥನಾ ಮಂದಿರದಲ್ಲಿ ಇಂದು ನೂತನ ರಾಷ್ಟ್ರೀಯ ಪಕ್ಷ ಬಿಪಿಕೆಪಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಟರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಟ ಕಮಲ್ ಹಾಸನ್ ಹಿಂದೂ ಉಗ್ರವಾದದ ಬಗ್ಗೆ ಮಾತನಾಡಿದ್ದು ವಿವಾದ ಸೃಷ್ಟಿಸಿತ್ತು. ನಟ ಪ್ರಕಾಶ್ ರೈ, ಬೆಂಗಳೂರಿನ ಸಮಾರಂಭವೊಂದರಲ್ಲಿ ಯೋಗಿ ಅಧಿತ್ಯನಾಥ್, ಪ್ರದಾನಿ ಮೋದಿ ವಿರುದ್ದ ಮಾತನಾಡಿದ್ದರು.

ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ಉತ್ತಮ ನಟರು. ಆದರೆ ಅವರಿಬ್ಬರೂ ಮೂರ್ಖರು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಮುತಾಲಿಕ್, ನಾನು ಚುನಾವಣೆಗೆ ನಿಲ್ಲುತ್ತೇನೆ, ಯಾವ ಪಕ್ಷ ಮತ್ತು ಕ್ಷೇತ್ರ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಶೀಘ್ರದಲ್ಲಿ ಈ ಬಗ್ಗೆ ನಿರ್ಧರಿಸುತ್ತೇನೆ ಎಂದಿದ್ದಾರೆ.