ಮನೆ ಮಾರಾಟಕ್ಕಿದೆ ಅಂತಿದ್ದಾರೆ ಶ್ರುತಿ ಹರಿಹರನ್​! ಮೀಟೂ ಬಳಿಕ ಮತ್ತೆ ಸುದ್ದಿಯಾದ ನಟಿ!!

ಸ್ಯಾಂಡಲ್ ವುಡ್ ನಲ್ಲಿ #MeToo ವಿವಾದದಲ್ಲಿ ಸಿಲುಕಿ ಕೊಂಡಿದ್ದ ನಟಿ ಶ್ರುತಿ ಹರಿಹರನ್ ಏನ್ ಮಾಡ್ತಿದ್ದಾರೆ ಅನ್ನೋ ಕುತೂಹಲ ಜನರಲ್ಲಿತ್ತು. ಆದರೇ ಈಗ ಶ್ರುತಿ ಹರಿಹರನ್​ ಮನೆ ಮಾರಾಟಕ್ಕಿದೆ ಎನ್ನುತ್ತ ಮತ್ತೆ ಸುದ್ದಿಯಲ್ಲಿದ್ದಾರೆ.

ad

‘ನಾತಿಚರಾಮಿ’ ಚಿತ್ರದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಶ್ರುತಿ ಹರಿಹರನ್#MeToo ಸೇರಿದಂತೆ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ರು. ಸೋಶಿಯಲ್​ ಮೀಡಿಯಾ ತುಂಬೆಲ್ಲಾ ವಿದೇಶಕ್ಕೆ ಹಾರಿದ್ದಾರೆ, ಯಾವುದೇ ಸಿನಿಮಾಗಳಲ್ಲಿ ನಟಿಸೋಲ್ಲ ಅನ್ನೋ ಗಾಸಿಪ್​ಗಳು ಇದ್ದವು. ಅಷ್ಟೇ ಅಲ್ಲ ಶ್ರುತಿ ಹರಿಹರನ್​ ತಾಯಿಯಾಗುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು.

ಆದ್ರೆ ಇದೀಗ ಶ್ರುತಿ ಹರಿಹರನ್ ‘ಮನೆಮಾರಾಟಕ್ಕಿದೆ’ ಎನ್ನುತ್ತ ಸುದ್ದಿಯಾಗಿದ್ದಾರೆ. ಇಷ್ಟಕ್ಕೂ ಶ್ರುತಿ ತಮ್ಮ ಮನೆ ಮಾರಾಟ ಮಾಡ್ತಿಲ್ಲ. ಬದಲಾಗಿ ಇದು ಅವರ ಮುಂದಿನ ಚಿತ್ರದ ಹೆಸರು. ಹೌದು ಮಂಜು ಸ್ವರಾಜ್​ ಅಭಿನಯದ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಶ್ರುತಿ ಮತ್ತೆ ಸ್ಯಾಂಡಲವುಡ್​ಗೆ ಮರಳುತ್ತಿದ್ದಾರೆ.

ಚಿತ್ರದಲ್ಲಿ ಶ್ರುತಿ ಪಾತ್ರ ಯಾವುದು ಅನ್ನೋದು ಇನ್ನು ರಿವೀಲ್ ಆಗಿಲ್ಲ. ಸಾಧುಕೋಕಿಲಾ, ಚಿಕ್ಕಣ್ಣ, ಕುರಿಪ್ರತಾಪ್ , ರವಿ ಶಂಕರ್ ಗೌಡ ಕಾಂಬಿನೇಷನ್​ನಲ್ಲಿ ಮನೆ ಮಾರಾಟಕ್ಕಿದೆ ಸಿನಿಮಾ ಸೆಟ್ಟೇರಿದ್ದು, ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಮಿಂಚಲಿದ್ದಾರೆ.

ಇನ್ನು ಇದೊಂದು ಪಕ್ಕಾ ಕಾಮಿಡಿ ಕಂ ಹಾರರ್​ ಜಾನರ್ ಸಿನಿಮಾವಾಗಿದ್ದು, ನಾಲ್ವರು ಬಿಗ್ ಕಾಮಿಡಿ ಸ್ಟಾರ್​ಗಳು ಚಿತ್ರದ ಮೂಲಕ ನಗೆಗಡಲಲ್ಲಿ ತೇಲಿಸಲಿದ್ದಾರೆ. ‘ಮನೆಮಾರಾಟಕ್ಕಿದೆ’ ಎಂಬ ಟೈಟಲ್​ನಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.