ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ​ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಬೆಂಗಳೂರಿನ BGS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಶ್ರೀಗಳು ಇಂದು ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ. ಶ್ರೀಗಳ ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟೆಂಟ್​ಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳಿಗೆ ಬೆಂಗಳೂರಿನ BGS ಆಸ್ಪತ್ರೆಯಲ್ಲಿ ವೈದ್ಯರು ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಸ್ಟೆಂಟ್ ಬದಲಾವಣೆ ಮಾಡಿದ್ರು. ಈಗ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರ್ತಿದೆ.
=====
ಇವತ್ತು ಬೆಳಿಗ್ಗೆಯೇ ಸಿದ್ದಗಂಗಾ ಮಠದಿಂದ ಶ್ರೀಗಳಿಗೆ ಪ್ರಸಾದ ತರಲಾಯ್ತು. ವೈದ್ಯರ ಸಲಹೆಯಂತೆ ದ್ರವರೂಪದ ಉಪಹಾರವನ್ನು ಶ್ರೀಗಳು ಸೇವಿಸಿದ್ದಾರೆ.
=====
ಮಠದ ಕಿರಿಯಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳೂ ಆಗಮಿಸಿ ಶಿವಕುಮಾರಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಶ್ರೀಗಳು ಲವಲವಿಕೆಯಿಂದ ಕಂಡು ಬಂದರು. ಕೊಠಡಿಗೆ ಬಂದ ಮಾಧ್ಯಮದ ಪ್ರತಿನಿಧಿಗಳನ್ನು ಶಿವಕುಮಾರಸ್ವಾಮೀಜಿ ಪ್ರಸಾದ ಆಯ್ತಾ ಅಂತಾ ಕೈಸನ್ನೇ ಮೂಲಕ ವಿಚಾರಿಸಿಕೊಂಡರು.
======
ಇವತ್ತು ಮತ್ತೊಂದು ಸುತ್ತಿನ ರಕ್ತ ಪರೀಕ್ಷೆ ನಡೆಯಲಿದೆ. ಆ ವರದಿ ಬಂದ ನಂತರ ವೈದ್ಯರ ಸಲಹೆ ಪಡೆದು ಮಠಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here