ಖರ್ಗೆ ಪರ ಪ್ರಚಾರಕ್ಕೆ ಬಂದ ಸಿದ್ಧು ಕೈಯಲ್ಲಿ ಲಿಂಬೆಹಣ್ಣು! ಲಿಂಬೆಹಣ್ಣಿನ ಮಹತ್ವದ ಬಗ್ಗೆ ಸಿದ್ಧು ಏನಂದ್ರು ಗೊತ್ತಾ?!

ಮೂಡನಂಬಿಕೆ, ಜ್ಯೋತಿಷ್ಯ ವಿರೋಧಿಸುವ ಮೂಲಕ ಸುದ್ದಿಯಾಗಿದ್ದ ಸಮಾಜವಾದಿ ಹಿನ್ನೆಲೆಯ ಸಿದ್ಧರಾಮಯ್ಯ ಇಂದು ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕೆ  ಕಲ್ಬುರ್ಗಿಗೆ ಆಗಮಿಸಿದ್ದರು. ಆದರೆ ಈ ವೇಳೆ ಸಿದ್ಧರಾಮಯ್ಯ ಕೈಯಲ್ಲಿ ಲಿಂಬುಹಿಡಿದುಕೊಂಡು ಬಂದಿದ್ದು, ಮಾಧ್ಯಮಗಳ ಕುತೂಹಲಕ್ಕೆ ಕಾರಣವಾಯಿತು. ಏನ್ ಸರ್ ನಿಮ್ಮ ಕೈಯಲ್ಲೂ ಲಿಂಬು ಅನ್ನೋ ಪ್ರಶ್ನೆಗೆ ಸಿದ್ಧು ತಮ್ಮ ಎಂದಿನ ಸ್ವಾರಸ್ಯಕರ ಶೈಲಿಯಲ್ಲಿ ಉತ್ತರಿಸಿದರು.

ad

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕೆ ಕಲಬುರ್ಗಿಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೈನಲ್ಲಿ ನಿಂಬೆ ಹಣ್ಣು ಹಿಡಿದು ಎಲ್ಲರನ್ನೂ ಅಚ್ಚರಿಗೆ ದೂಡಿದ್ರು. ಮೂಡನಂಬಿಕೆಗಳ ಆಚರಣೆಗಳಿಂದ ದೂರವಿರುವ ಸಿದ್ದರಾಮಯ್ಯನವರ ಕೈಯಲ್ಲಿ ಈ ರೀತಿ ನಿಂಬೆ ಹಣ್ಣು ಇದ್ದದ್ದು ಅಲ್ಲಿ ನೆರೆದಿದ್ದವರು ಆಶ್ಚರ್ಯ ಪಡುವಂತೆ ಮಾಡಿದೆ.

ಡಿಎಆರ್ ಪೊಲೀಸ್ ಮೈದಾನಕ್ಕೆ ಬಂದಾಗ ಸಿದ್ದರಾಮಯ್ಯ ಅವರ ಕೈನಲ್ಲಿ ನಿಂಬೆ ಹಣ್ಣು   ಇತ್ತು . ಇದನ್ನು ಕಂಡ ಮಾಧ್ಯಮ ಪ್ರತಿನಿಧಿಗಳು ಏನ್ ಸರ್ ನಿಮ್ ಕೈನಲ್ಲಿ ನಿಂಬೆಹಣ್ಣು ಅಂತಾ ಪ್ರಶ್ನೆ ಮಾಡಿದ್ರು. ಇಲ್ರಪ್ಪಾ, ಬರೋವಾಗ ಯಾರೋ ಕೊಟ್ರು,ಹಿಡ್ಕೊಂಡು ಬಂದೆ ಅಷ್ಟೆ ಇದ್ರಲ್ಲಿ ನಂಗೆ ನಂಬಿಕೆಯಿಲ್ಲ. ನಿಂಗೆ ಒಳ್ಳೆಯದಾದರೆ ಆಗ್ಲಿ ಅಂತ ಹೇಳಿ ಪಕ್ಕದಲ್ಲಿದ್ದ ಪತ್ರಕರ್ತರ ಜೇಬಿಗೆ ನಿಂಬೆಹಣ್ಣು ಹಾಕಿ ಎಂದಿನಂತೆ ತಮ್ಮ ಹಾಸ್ಯದ ಶೈಲಿಯಲ್ಲಿ ಲೇವಡಿ ಮಾಡಿದರು.

ಈ ಹಿಂದೆ ಹಾಸನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ರೇವಣ್ಣ ಕೈತುಂಬ ನಿಂಬೆಹಣ್ಣುಗಳನ್ನು ಹಿಡಿದು ನಿಂತಿದ್ದರು. ಅಲ್ಲದೆ ಬಂದ ಎಲ್ಲ ನಾಯಕರಿಗೂ ಲಿಂಬೆಹಣ್ಣು ಕೊಟ್ಟು ಬರಮಾಡಿಕೊಂಡಿದ್ದರು.  ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಸಹ ಒಳಗಾಗಿತ್ತು. ಇದೀಗಾ ಜೆಡಿಎಸ್ ನೊಂದಿಗೆ ಮೈತ್ರಿಯಲ್ಲಿರುವ ಸಿದ್ದರಾಮಯ್ಯ ಅದೇ ಮಾದರಿಯಲ್ಲಿ ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಕಾಣಿಸಿಕೊಂಡಿದ್ದಾರೆ.