ಎಚ್ ಡಿ ಕುಮಾರಸ್ವಾಮಿ ವಿರುದ್ದ ಬಂಡೆದ್ದ ಸಿದ್ದರಾಮಯ್ಯ !! ಬಜೆಟ್ ಮಂಡನೆಗೆ ಸಮನ್ವಯ ಸಮಿತಿ ಅಧ್ಯಕ್ಷರ ವಿರೋಧ !!

ಇಲ್ಲಿಯವರೆಗೆ ಮೈತ್ರಿ ಸರಕಾರದಲ್ಲಿ ಸಚಿವ ಸಂಪುಟ ಸೇರ್ಪಡೆ, ಖಾತೆ ಹಂಚಿಕೆ ಭಿನ್ನಮತಗಳು ನಡೆದಿತ್ತು. ಹಾಗೆಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಎಚ್ ಡಿ‌ ಕುಮಾರಸ್ವಾಮಿ ಭಿನ್ನಮತ ಪರಿಹರಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೀಗ ಖುದ್ದು ಸಮನ್ವಯ ಸಮಿತಿ ಅಧ್ಯಕ್ಷರೇ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ದ ಬಂಡೆದ್ದಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ರಾಜ್ಯ ಬಜೆಟ್ ಮಂಡಿಸಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಮೈತ್ರಿ ಸರಕಾರ ನನ್ನ ಸರಕಾರದ ಹಳೇ ಯೋಜನೆಗಳನ್ನೇ ಮುಂದುವರೆಸುತ್ತೆ. ನಾನು ಪೂರ್ಣಪ್ರಮಾಣದ ಬಜೆಟ್ ಮಂಡಿಸಿದ್ದೆ. ನಾನು ಬಜೆಟ್ ನಲ್ಲಿ ಮಂಡಿಸಿದ್ದ ಎಲ್ಲಾ ಯೋಜನೆಗಳು ಜಾರಿಯಲ್ಲಿರುತ್ತೆ. ಆದ್ದರಿಂದ ಮತ್ತೊಮ್ಮೆ ಎಚ್ ಡಿ ಕುಮಾರಸ್ವಾಮಿ ಬಜೆಟ್ ಮಂಡಿಸಬಾರದು. ಹೊಸ ಯೋಜನೆಗಳೇನಾದರೂ ಇದ್ದರೆ ಪೂರಕ ಅಂದಾಜು ಪಟ್ಟಿ ಸಲ್ಲಿಸಿ ಸೇರಿಸಿಕೊಳ್ಳಲಿ ಎಂದಿದ್ದಾರೆ.

 

ಕುಮಾರಸ್ವಾಮಿಯವರು ಹೊಸದಾಗಿ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರಲ್ವಾ ಎಂದು ಸಿದ್ದರಾಮಯ್ಯರನ್ನು ಕೇಳಿದ್ರೆ, ಸುಮ್ನಿರ್ರಿ. ಕುಮಾರಸ್ವಾಮಿಯನ್ನೇನು ಕೇಳ್ತೀರಿ ? ನಾನು ಹೇಳೋದನ್ನು ಕೇಳಿ. ನಾನು ಮಂಡಿಸಿದ್ದ ಪೂರ್ಣಪ್ರಮಾಣದ ಬಜೆಟ್ ಅನ್ನೇ ಈ ಸರಕಾರವೂ ಮುಂದುವರೆಸುತ್ತೆ. ಮತ್ತೆ ಎಚ್ ಡಿಕೆ ಬಜೆಟ್ ಮಂಡಿಸೋ ಅಗತ್ಯ ಇಲ್ಲ ಎಂದರು.

ಇದು ಸಮ್ಮಿಶ್ರ ಸರಕಾರದ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇದೆ. ಹೊಸದಾದ ಸರಕಾರದ ನೇತೃತ್ವದ ವಹಿಸಿಕೊಂಡ ನೂತನ ಮುಖ್ಯಮಂತ್ರಿಗೆ ಬಜೆಟ್ ಮಂಡನೆ ಮೂಲಕ ಜನಪರ ಯೋಜನೆ ಘೋಷಿಸೊ ಮಹದಾಸೆ ಇರುತ್ತೆ. ಆ ಮೂಲಕ ಜನರಿಗೆ ಹತ್ತಿರವಾಗಲು ಮತ್ತು ಸರಕಾರವೊಂದು ರಾಜ್ಯಕ್ಕೆ ಯಾವ ಜನಪರ ಯೋಜನೆ ಘೋಷಿಸಿದೆ ಎಂದು ಇತಿಹಾಸದ ಪುಟದಲ್ಲಿ ದಾಖಲಾಗಲು ಬಜೆಟ್ ಮಂಡನೆಯೊಂದೇ ಅವಕಾಶ. ಆದರೆ ಸಿದ್ದರಾಮಯ್ಯ ಅದಕ್ಕೆ ಅಡ್ಡಿಯಾಗಿರೋದು ಮೈತ್ರಿ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇದೆ.