ಮಹದೇವಪ್ಪಗೆ ಸಖತ್​ ಶಾಕ್ ನೀಡಿದ ಸಿದ್ದು- ಎಂಪಿ ಎಲೆಕ್ಷನ್​ ಜವಾಬ್ದಾರಿಯಿಂದ ಮಹದೇವಪ್ಪ ಔಟ್ !

 

ad

ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತೆ ತಮ್ಮ ಚಾಣಾಕ್ಷ್ಯ ರಾಜಕೀಯ ನಡೆಗೆ ಮರಳಿದ್ದಾರೆ. ಹೌದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಕ್ಕಮಟ್ಟಿಗೆ ಹಿನ್ನಡೆ ಅನುಭವಿಸಿದ್ದ ಮಾಜಿ ಸಿಎಂ ಸಿದ್ಧು ಮತ್ತೆ ಚೇತರಿಸಿಕೊಂಡಿದ್ದು, ಪಕ್ಷದಲ್ಲಿ ತಮ್ಮ ಸ್ಥಾನಮಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಆಪ್ತಮಿತ್ರನಾಗಿದ್ದ ಎಚ್.ಸಿ.ಮಹದೇವಪ್ಪರನ್ನೆ ತಮ್ಮ ಆಪ್ತವಲಯದಿಂದ ದೂರವಿಡಲು ರಣತಂತ್ರ ರೂಪಿಸಿದ್ದಾರೆ.
ಹೌದು ಈಗಾಗಲೇ ಸಿದ್ಧು ಎಚ್.ಸಿ.ಮಹದೇವಪ್ಪ ಅವರನ್ನು ಎಂಪಿ ಚುನಾವಣೆಯಿಂದ ಹೊರಗಿಡಲು ಸಿದ್ಧರಾಮಯ್ಯ ನಿರ್ಧರಿಸಿದ್ದು, ಅವರಿಗೆ ಯಾವುದೇ ಜವಾಬ್ದಾರಿ ನೀಡದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಿದ್ಧರಾಮಯ್ಯ ಈಗಾಗಲೇ ಮೈಸೂರು ಕಾಂಗ್ರೆಸ್ಸಿಗರಿಗೂ ಈ ಬಗ್ಗೆ ಸೂಕ್ತ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ನಿನ್ನೆ ಮೈಸೂರಿನಲ್ಲಿ ಸಿದ್ಧರಾಮಯ್ಯ ನಡೆಸಿದ ಸಭೆಗೂ ಮಹದೇವಪ್ಪನವರಿಗೆ ಆಹ್ವಾನ ಇರಲಿಲ್ಲ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಮೈಸೂರಿನಲ್ಲಿ ಕೆ.ಸಿ.ವೇಣುಗೋಪಾಲ್ ನೇತ್ರತ್ವದಲ್ಲಿ ಸಭೆ ನಡೆದಿತ್ತು, ಇದರಲ್ಲಿ ಮಾಜಿಶಾಸಕರು, ಎಂಪಿಗಳು ಹಾಲಿ ಜನಪ್ರತಿನಿಧಿಗಳು ಭಾಗಿಯಾಗಿದ್ರು. ಈ ಸಭೆಯಲ್ಲೂ ಸಿದ್ದರಾಮಯ್ಯ ಮಹದೇವಪ್ಪಗೆ ದೂರವಿರುವಂತೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಖರ್ಚಿಗೆ ಹಣ ನೀಡುವಂತೆ ಎಲ್ಲರಿಗೂ ಸೂಚಿಸಲಾಗಿತ್ತು. ಆದರೇ ಮಹದೇವಪ್ಪ ಹಂಚಿಕೆಗೆ ನೀಡಿದ್ದ ಹಣ ನೀಡದೇ ಕೈಕೊಟ್ಟಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಒಂದು ಕಾಲದಲ್ಲಿ ತಮ್ಮ ಆಪ್ತರಾಗಿದ್ದ ಮಹದೇವಪ್ಪನವರನ್ನು ದೂರವಿಡುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.