ಇಷ್ಟು ದಿನ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿ ಜನರನ್ನ ಆತಂಕಕ್ಕೀಡು ಮಾಡಿತ್ತು. ಇದೀಗ ಗದಗದಲ್ಲಿ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗೋ ಮೂಲಕ ಜನ್ರನ್ನು ಗಾಬರಿಗೊಳಿಸಿದೆ. ಗದಗ ಜಿಲ್ಲೆಯ ಹೊಂಬಳ ಗ್ರಾಮದ 2 ರೇಷನ್ ಅಂಗಡಿಯಲ್ಲಿ ಕಳೆದ 4 ದಿನಗಳಿಂದ ಅಕ್ಕಿ ವಿತರಣೆ ಮಾಡಲಾಗಿದೆ. ವಿತರಣೆ ಮಾಡಿದ ಅಕ್ಕಿಯಲ್ಲಿ ಸಬ್ಬಕ್ಕಿಯಾಕಾರದ ವಸ್ತು ಪತ್ತೆಯಾಗಿದೆ. ತಿನ್ನುವ ಅನ್ನದಲ್ಲಿ ಪ್ಲಾಸ್ಟಿಕ್​ ಕಂಡು ಜನ ಗಾಬರಿಗೊಂಡಿದ್ದಾರೆ. ಕಳೆದ ಮೇ 27ರಂದು ಗದಗ ತಾಲೂಕಿನ ಇಟಗಿ ಗ್ರಾಮದಲ್ಲಿ ಪಾಸ್ಟಿಕ್ ಸಕ್ಕರೆ ಸಿಕ್ಕಿತ್ತು. ಈಗ ಅಕ್ಕಿಯಲ್ಲಿ ಪ್ಲಾಸ್ಟಿಕ್ ಸಿಕ್ಕಿರುವುದರಿಂದ ಸ್ಥಳೀಯರು ಆಹಾರ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here