ವೈರ್ ಒಳಗೆ ಸಿಲುಕಿ ಹಾವಿನ ನರಳಾಟ

ಅದು ಫ್ಯಾನ್ಸಿ ಸ್ಟೋರ್. ಆದರೇ ಅಲ್ಲಿಗೆ ಬಂದಿದ್ದು ಹುಡುಗಿಯರಲ್ಲ ಬದಲಾಗಿ ಬರೋಬ್ಬರಿ ಅಡಿ ಉದ್ದದ ನಾಗರಹಾವು. ಹೌದು ಪ್ಯಾನ್ಸಿ ಸ್ಟೋರ್​ಗೆ ಬಂದ ಹಾವೊಂದು ವೈರ್​ನಲ್ಲಿ ಸಿಲುಕಿಕೊಂಡು ಒದ್ದಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ರಾಜೇಂದ್ರ ಪ್ರಸಾದ್ ಹೆಗಡೆ ಎಂಬುವವರಿಗೆ ಸೇರಿದ ಫ್ಯಾನ್ಸಿ ಸ್ಟೋರ್​​ ಗ ನಾಗರಹಾವೊಂದು ಬಂದಿತ್ತು.

ಈ ವೇಳೆ ಶಾಪ್​​ನಲ್ಲಿದ್ದ ವೈರ್​​ಗೆ ಹಾವು ಸಿಲುಕಿದ್ದು, ಹೊಟ್ಟೆ ಭಾಗದಲ್ಲಿ ವೈರ್​ ಬಿಗಿದುಕೊಂಡಿದ್ದರಿಂದ ಹಾವು ಸಾವು-ಬದುಕಿನ ನಡುವೆ ಒದ್ದಾಡುತ್ತಿತ್ತು. ತಕ್ಷಣ ಸ್ಥಳೀಯರು ಸ್ನೇಕ್​ ನರೇಶ್​ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್​ ನರೇಶ್ ಹಾವನ್ನು ವೈರ್​ನಿಂದ ನಾಜೂಕಾಗಿ ರಕ್ಷಿಸಿದ್ದಾರೆ. ಬಳಿಕ ಹಾವನ್ನು ಕಳಸ ಕಾಡಿಗೆ ಬಿಟ್ಟು ಬರಲಾಗಿದೆ. ಕೊನೆಗೂ ಹಾವೊಂದು ಜನರ ಕರುಣೆಯಿಂದ ಮರುಜನ್ಮ ಪಡೆದಿದೆ.