‘ನಡು ರಸ್ತೆಯಲ್ಲೇ ಮೊಟ್ಟೆ ಇಟ್ಟ ನಾಗಿಣಿ…!!

ಸಾಮಾನ್ಯವಾಗಿ ನಾಗರಹಾವು ಪೊದೆಗಳು..ಭೂಮಿಯ ಬಿಲಗಳಲ್ಲಿ ಮೊಟ್ಟೆಗಳನ್ನು ಹಾಕುತ್ತದೆ. ಆದ್ರೆ ಇಲ್ಲೊಂದು ನಾಗರ ಹಾವು ನಡುರಸ್ತೆಯಲ್ಲೇ ಮೊಟ್ಟೆಗಳನ್ನಿಟ್ಟಿದೆ. ಹಾವು ಮೊಟ್ಟೆ ಹಾಕುವುದನ್ನ ಮೊಬೈಲ್​​ನಲ್ಲಿ ಚಿತ್ರಿಸಿಕೊಂಡ ಒಬ್ಬರು ಇದೀಗ ವೈರಲ್ ಮಾಡಿದ್ದಾರೆ.

ad

ಅಂದಹಾಗೆ ಈ ಹಾವು ಮೊಟ್ಟೆ ಇಟ್ಟಿರೋದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ. ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರ ಬಳಿ ಹಾವು ಸುಮಾರು 14 ಮೊಟ್ಟೆ ಇಟ್ಟಿದೆ. ನಾಗರಹಾವು ಮೊಟ್ಟೆ ಇಡೋದನ್ನು ನೋಡಲು ಜನ ಸೇರಿದ್ದಾರೆ. ಮೊಟ್ಟೆ ಇಟ್ಟು ಸುಸ್ತಾಗಿದ್ದ ನಾಗರವನ್ನು ಸ್ನೇಕ್ ಪ್ರಸನ್ನರಿಂದ ನಾಗರ ಹಾವು ಮತ್ತು ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ.