ಬಿಜೆಪಿಯೂ ಅಪ್ಪ-ಮಕ್ಕಳ ಪಕ್ಷ- ಸ್ವಪಕ್ಷಿಯರಿಂದಲೇ ಗಂಭೀರ ಆರೋಪ

ಚುನಾವಣೆ ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ಅಧಿಕಾರದ ಕನಸಿನಲ್ಲಿರುವ ಬಿಜೆಪಿಯಲ್ಲಿ ಒಡಕು ಮೂಡ ತೊಡಗಿದೆ. ಹೌದು ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ್ದು, ಬಿಜೆಪಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂದವರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಬಿಜೆಪಿಯೂ ಅಪ್ಪ-ಮಕ್ಕಳ ಪಕ್ಷವಾಗಿದೆ. ಪರಿವರ್ತನಾ ರ್ಯಾಲಿಗೆ 500-1000 ರೂ ಕೊಟ್ಟು ಕಾರ್ಯಕರ್ತರನ್ನು ಕರೆತರಲಾಗಿದೆ ಎಂದು ಪಕ್ಷದ ವಿರುದ್ಧವೇ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.
ನಾನು ಜನಸಂಘಕಾಲದಿಂದಲೂ ಬಿಜೆಪಿಯಲ್ಲಿದ್ದೇನೆ. ಆದರೇ ತುಮಕೂರಿನಲ್ಲಿ ಕಾಂಗ್ರೆಸ್​​ನಿಂದ ಅಪ್ಪ-ಮಕ್ಕಳು ಬಿಜೆಪಿಗೆ ಬಂದರು. ಬಂದ ಮೇಲೆ ತುಮಕೂರು ಜಿಲ್ಲಾ ಕಾಂಗ್ರೆಸ್​ ಅಪ್ಪ-ಮಕ್ಕಳ ಪಕ್ಷವಾಗಿದೆ ಎಂದು ಸೊಗಡು ಶಿವಣ್ಣ ಬಹಿರಂಗ ಅಸಮಧಾನ ತೋಡಿಕೊಂಡಿದ್ದಾರೆ.
ಪರಿವರ್ತನಾ ರ್ಯಾಲಿ ತುಮಕೂರಿನಲ್ಲಿ ಕೇವಲ ಕೆಜೆಪಿ ರ್ಯಾಲಿ ಎಂಬಂತಾಗಿದೆ. ಪಕ್ಷದಲ್ಲಿ ಕಾಂಗ್ರೆಸ್​​ನಿಂದ ಬಂದವರಿಗೆ ಮಾನ್ಯತೆ ಸಿಗುತ್ತಿದೆ. ಪಕ್ಷದಲ್ಲಿ ಅಪ್ಪ-ಮಕ್ಕಳ ದ್ವೇಷ ಹೆಚ್ಚುತ್ತಿದೆ ಎಂದು ಸ್ಥಳೀಯ ನಾಯಕರನ್ನು ಕಡೆಗಣಿಸಲಾಗುತ್ತಿದೆ.

ಬಿಜೆಪಿ ಅಪ್ಪ ಮಕ್ಕಳಿಂದ ಬೆಳೆದಿಲ್ಲಾ ಜಿಲ್ಲಾದ್ಯಂತ ಬಿಜೆಪಿ ಪಕ್ಷವನ್ನು ಬೆಳೆಸಿದ್ದೇವೆ.  ಯಡಿಯೂರಪ್ಪ ಯಾತ್ರೆಗೆ ಒಳ್ಳೇಯದಾಗಿದೆ. ನಾನು ಪಾರ್ಟಿ ಕಾರ್ಯಕರ್ತರನ್ನು ಬಿಟ್ಟು ಕೆಲಸ ಮಾಡುವುದಿಲ್ಲ.ಆದರೇ ನಾನು ಬಿಜೆಪಿಯಿಂದಲ್ಲೇ ಸ್ಪರ್ಧೆ ಮಾಡ್ತೀನಿ ಎಂದಿದ್ದಾರೆ. ಪರಿವರ್ತನಾ ರ್ಯಾಲಿ ಆರಂಭದ ಬೆನ್ನಲ್ಲೇ ನಿಧಾನಕ್ಕೆ ಬಿಜೆಪಿಯಲ್ಲಿ ಅಸಮಧಾನದ ಹೊಗೆ ದಟ್ಟವಾಗ ತೊಡಗಿದ್ದು, ಚುನಾವಣೆ ವೇಳೆಗೆ ನಡೆಯುತ್ತಿರುವ ಈ ವಿದ್ಯಮಾನಗಳು ಪಕ್ಷದ ನಾಯಕರ ಆತಂಕಕ್ಕೆ ಕಾರಣವಾಗಿದೆ. .

ಪ್ರತ್ಯುತ್ತರ ನೀಡಿ

Please enter your comment!
Please enter your name here