ರಮ್ಯ ಒಬ್ಬಳು ವಯ್ಯಾರಿ-ಅವಳ ಮಾತಿಗೆ ಮಹತ್ವಬೇಡ- ಮಾಜಿ ಸಚಿವ ಸೊಗಡು ಶಿವಣ್ಣ ಟೀಕೆ!

Sogadu Shivanna Statement against Actress Ramya.

ಕಾಂಗ್ರೆಸ್​ ನ ಯುವ ನಾಯಕಿ ಹಾಗೂ ಮಾಜಿ ಸಂಸದೆ ರಮ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್​ ಮಾಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ರಮ್ಯ ನಿನ್ನೆ-ಮೊನ್ನೆ ರಾಜಕಾರಣಕ್ಕೆ ಅಂಬೆಗಾಲಿಟ್ಟವರು. ಅವರಿಗೆ ಪ್ರಧಾನಿ ಮೋದಿ ಬಗ್ಗೆ ಟೀಕಿಸುವಷ್ಟು ಪ್ರಬುದ್ಧತೆ ಇಲ್ಲ ಎಂದು ಕೇಸರಿನಾಯಕರು ಕಿಡಿಕಾರಿದ್ದಾರೆ. ಹೀಗಿರುವಾಗಲೇ ಮಾಜಿ ಸಚಿವ ಸೊಗಡು ಶಿವಣ್ಣ ಮಾಜಿಸಂಸದೆ ರಮ್ಯ ವಿರುದ್ಧ ಲಘುವಾಗಿ ಮಾತನಾಡಿದ್ದು, ರಮ್ಯ ಒಬ್ಬಳು ವಯ್ಯಾರಿ ಎಂದಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸೊಗಡು ಶಿವಣ್ಣ, ರಮ್ಯಾ ಒಬ್ಬಳು ವಯ್ಯಾರಿ, ನಟನೆ ಮಾಡೋದಷ್ಟೆ ಆಕೆ ಕೆಲಸಆಕೆಗೆ ಸರ್ಕಾರ, ಸಮಾಜ, ಪ್ರಜಾಪ್ರಭುತ್ವ ಏನೂ ಗೊತ್ತಿಲ್ಲ.

 

ಆಕೆಯ ಹೇಳಿಕೆಗೆ ಮಹತ್ವ ಕೊಟ್ಟರೇ ದೇಶದ ಜನರಿಗೆ ಅಪಮಾನ ಮಾಡಿದಂತೆ. ದೇಶಕ್ಕೆ ರಮ್ಯ ಕೊಟ್ಟಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.  ರಮ್ಯ ವಯ್ಯಾರದಲ್ಲಿ ಸಮಾಜಕ್ಕೆ, ದೇಶಕ್ಕೆ ಬೇಕಾದದ್ದು ಏನನ್ನು ನೋಡಿಲ್ಲ ಎಂದು ರಮ್ಯ ವಿರುದ್ಧ ಸೊಗಡು ಕಿಡಿಕಾರಿದ್ದಾರೆ. ಇತ್ತೀಚಿಗಷ್ಟೇ ರಮ್ಯ, ಪ್ರಧಾನಿ ನಶೆಯಲ್ಲಿದ್ದಾರೆ ಎಂಬರ್ಥದಲ್ಲಿ ಟ್ವಿಟ್​ ಮಾಡಿ ದೇಶದಾದ್ಯಂತ ಟೀಕೆಗೆ ಗುರಿಯಾಗಿದ್ದರು. ಇದೀಗ ರಮ್ಯ ಹೇಳಿಕೆ ಖಂಡಿಸುವ ಭರದಲ್ಲಿ ಸೊಗಡು ಶಿವಣ್ಣ ಆಕೆಯ ಬಗ್ಗೆ ಲಘುವಾಗಿ ಮಾತಾಡಿದ್ದು, ಇದು ಕೂಡ ಮತ್ತೆ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here