ಪಕ್ಷದ ಅತೃಪ್ತಿಗೆ ಸಮನ್ವಯ ಸಮಿತಿ ಸಭೆಯಲ್ಲಿ ಮದ್ದು- ನಮಗೆ 20 ನಿಮಗೆ 10 ಅಂತ ಅಂದ್ರು ಕಾಂಗ್ರೆಸ್ ನಾಯಕರು!

 

ಸಮ್ಮಿಶ್ರ ಸರ್ಕಾರದ ಹಲವು ಅತೃಪ್ತಿಗಳಿಗೆ ನಿನ್ನೆ ನಡೆದ ಸಮನ್ವಯ ಸಮಿತಿ ಸಭೆ ಮದ್ದು ಹುಡುಕಿದೆ. ಬಂಡಾಯ ಶಮನಕ್ಕೆ ಸಮನ್ವಯ ಸಮಿತಿಯಲ್ಲಿ ಸೂತ್ರ ಸಿದ್ಧಪಡಿಸಲಾಗಿದ್ದು, ಅತೃಪ್ತ ಬಣಗಳ ಒಗ್ಗಟ್ಟು ಮುರಿಯಲು ನಿಗಮ ಮಂಡಳಿ ನೇಮಕವನ್ನು ಅಸ್ತ್ರವಾಗಿ ಬಳಸಲು ಕಾಂಗ್ರೆಸ್​​-ಜೆಡಿಎಸ್​ ಸಮನ್ವಯ ಸಮಿತಿ ಸೂತ್ರ ಸಿದ್ಧಪಡಿಸಿದೆ.
ನಿನ್ನೆ ನಡೆದ ಸಭೆಯಲ್ಲಿ ಪ್ರಮುಕವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್​​ನ ಅತೃಪ್ತರ ಬಗ್ಗೆ ಚರ್ಚೆ ನಡೆದಿದ್ದು, ಅವರೆಲ್ಲರ ಒಗ್ಗಟ್ಟು ಸಮ್ಮಿಶ್ರ ಸರ್ಕಾರದ ಆಯುಷ್ಯಕ್ಕೆ ಮಾರಕವಾಗುವ ಸಾಧ್ಯತೆ ಇರೋದರಿಂದ ನಿಗಮ ಮಂಡಳಿಗೆ ನೇಮಿಸಿ ಮನವೊಲಿಸುವ ಸೂತ್ರಕ್ಕೆ ಸಮನ್ವಯ ಸಮಿತಿ ಸಿದ್ಧವಾಗುತ್ತಿದೆ.

ಒಂದೇ ವಾರದಲ್ಲಿ 30 ನಿಗಮ ಮಂಡಳಿಗೆ ನೇಮಿಸಲು ಚಿಂತನೆ ನಡೆದಿದ್ದು, ನೇಮಕದಲ್ಲಿ ಶಾಸಕರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. 20 ಮತ್ತು 10 ರಂತೆ ನಿಗಮ ಮಂಡಳಿ ಹಂಚಿಕೊಳ್ಳಲು ಸಮನ್ವಯ ಸಮಿತಿ ತೀರ್ಮಾನಿಸಿದ್ದು, ಕಾಂಗ್ರೆಸ್​​ಗೆ 20 ಹಾಗೂ ಜೆಡಿಎಸ್​​ 10 ನಿಗಮ ಮಂಡಳಿ ನೀಡಲು ಪರಸ್ಪರ ಒಪ್ಪಿಗೆ ಸಿಕ್ಕಿದೆ.

ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚನೆಗೆ ಐವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಪ್ರಮುಖ ಹುದ್ದೆಗಳ ವರ್ಗಾವಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೇ ಇಲಾಖೆಗಳ ವರ್ಗಾವಣೆಗೆ ಸಂಬಂಧ ಪಟ್ಟ   ರೊಂದಿಗೆ ಚರ್ಚಿಸಿ ವರ್ಗಾವಣೆ ಮಾಡಲು ಸಮನ್ವಯ ಸಮಿತಿ ಸಿಎಂಗೆ ಸಲಹೆ ನೀಡಿದೆ.