ಸಚಿವ ಮಹದೇವಪ್ಪನ ಮಗ ಜೆಡಿಎಸ್​ನಿಂದ ನಿಲ್ತಾರಾ?- ಕಾಂಗ್ರೆಸ್​ನಲ್ಲಿ ನಡಿತಿದ್ಯಾ ಬ್ಲಾಕ್​ಮೇಲ್​ ರಾಜಕಾರಣ!

Son v/s Father - Son Contestent against his Father, Minister Mahadevappa

ಕಾಂಗ್ರೆಸ್​ನ ಅಪ್ಪ-ಮಕ್ಕಳ ರಾಜಕಾರಣದಲ್ಲೆ ಇದೊಂದು ಸ್ಪೋಟಕ ಸುದ್ದಿ. ಹೌದು ಕಾಂಗ್ರೆಸ್​ನ ಪ್ರಭಾವಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​ ತಂದೆ ವಿರುದ್ಧವೇ ತೊಡೆತಟ್ಟಿದ್ದಾರೆ.

ad


ಹೌದು ಕಾಂಗ್ರೆಸ್​ನಿಂದ ಟಿಕೇಟ್​ ಸಿಗದೇ ಇದ್ದರೇ ಸುನೀಲ್ ಜೆಡಿಎಸ್​ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಹೌದು ಟಿ.ನರಸೀಪುರದಲ್ಲಿ ಅಪ್ಪ-ಮಗನ ಫೈಟ್​ ನಡೆಯುವ ಮುನ್ಸೂಚನೆ ಲಭ್ಯವಾಗಿದೆ. ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​ಗೆ ಕಾಂಗ್ರೆಸ್​ನಿಂದ ಟಿಕೇಟ್​ ಸಿಗೋದು ಅನುಮಾನವಾಗಿದೆ. ಹೀಗಾಗಿ ಶತಾಯ-ಗತಾಯ ಚುನಾವಣೆಗೆ ಸ್ಪರ್ಧಿಸಲೇ ಬೇಕೆಂದು ನಿರ್ಧರಿಸಿರುವ ಸುನೀಲ್ ಬೋಸ್​, ಕಾಂಗ್ರೆಸ್​ನಿಂದ ಟಿಕೇಟ್​ ಸಿಗದೇ ಇದ್ದರೇ ಜೆಡಿಎಸ್​ನಿಂದ ಕಣಕ್ಕಿಳಿಯುವುದಾಗಿ ಬೆದರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವ ಮಹದೇವಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ ಹೈಕಮಾಂಡ್​ ಎದುರು ಕಣ್ಣೀರು ಹಾಕುತ್ತಿರುವ ಮಹದೇವಪ್ಪ ನನ್ನ ಮಗನಿಗೆ ಟಿಕೇಟ್​ ನೀಡಿ ಆತ ಬಂಡಾಯ ಹೋಗುವುದನ್ನು ತಪ್ಪಿಸಿ ಎಂದು ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಮುನಿಸಿಕೊಂಡಿರುವ ಮಹದೇವಪ್ಪ ಸಿಎಂ ಚಾಮುಂಡೇಶ್ವರಿ ಪ್ರಚಾರದ ವೇಳೆಯೂ ಗೈರಾಗಿದ್ದರು. ಒಟ್ಟಿನಲ್ಲಿ ಮಹದೇವಪ್ಪ ಪುತ್ರನ ಟಿಕೇಟ್​ ವಿಚಾರ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಜೆಡಿಎಸ್​​ಗೆ ಸೇರುವ ಬೆದರಿಕೆ ಒಡ್ಡುತ್ತಿರುವ ಮಗನ ಬೇಡಿಕೆಯಿಂದ ಮಹದೇವಪ್ಪ ಕಂಗಾಲಾಗಿದ್ದಾರೆ.