ಇವರೆಲ್ಲ ಜೈಲು ವಾಸ ಅನುಭವಿಸಿ ಬಂದವರು. ಈಗ ಇವರ ಜೀವನ ಹೇಗಿದೆ ನೋಡಿ..

ಸಾಮಾನ್ಯವಾಗಿ ಕೈದಿಗಳು ಅಂದರೆ ಸಾಕು ಸಮಾಜದಲ್ಲಿ ಅವರನ್ನ ಕೆಳಮಟ್ಟದಲ್ಲಿ ಕಾಣುತ್ತಾರೆ. ಇನ್ನೂ ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಿ ಬಂದರಂತ್ತೂ ಮುಗಿದೇ ಹೋಯಿತು ಅವರನ್ನು ಟ್ರೀಟ್ ಮಾಡುವ ಶೈಲಿಯೇ ಬದಲಾಗಿಬಿಡುತ್ತೆ. ಅವನಿಗೆ ಒಳ್ಳೆಯವನಲ್ಲ ಎಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ಇಂತಹ ಸಮಾಜದಲ್ಲಿ ಇಲ್ಲೋಬ್ಬ ಕೈದಿ ಸಿನಿಮೀಯ ರೀತಿಯಲ್ಲಿ ಜೈಲಿನಲ್ಲಿ ಸಾದನೆಗೈದು ಹೊರಗಿನ ಪ್ರಪಂಚಕ್ಕೆ ಮಾದರಿಯಾಗಿ ನಿಂತಿದ್ದಾನೆ. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಹೀಗೆ ಒಂದುಕಡೆ ಪುಸ್ತಕ ಓದುವುದರಲ್ಲಿ ಮತ್ತೊಂದು ಕಡೆ ಬೇಸಾಯ ಮಾಡುವುದರಲ್ಲಿ ಹಾಗೂ ಕಂಪ್ಯೂಟರ್‌ ನಲ್ಲಿ ಕಾರ್ಯನಿರ್ವಹಿಸುದರಲ್ಲಿ ತಲ್ಲೀನರಾಗಿರುವ ಇತನ ಹೆಸರು ಯಲ್ಲಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಿವಾಸಿ ೨೦೦೪ ರ ಮೇ ನಲ್ಲಿ ನಡೆದ ಒಂದು ಅಚಾನಕ್ ಘಟನೆಯಿಂದ ೧೪ ವರ್ಷಗಳ ಕಾಲ ಸೆರೆವಾಸಕ್ಕೆ ಗುರಿಯಾಗಿದ್ದ ಕೈದಿ ಈತ. ಇಂದು ಕೇವಲ ಕೈದಿಗಳಿಗೆ ಮಾತ್ರವಲ್ಲದೆ ಹಲವರಿಗೆ ಮಾದರಿಯಾಗಿ ನಿಂತಿದ್ದಾನೆ.

ಅಂದಹಾಗೆ ಯಲ್ಲಪ್ಪ ನೇಕಾರ ಕುಟುಂಬದಲ್ಲಿ ಜನಿಸಿ ಎಲ್ಲರಂತೆ ಸಾಮಾನ್ಯವಾಗಿ ಬದುಕು ಸಾಗಿಸುತ್ತಿದ್ದ. ಒಂದು ಕಾಲದಲ್ಲಿ ರಾಜ್ಯ ಮಟ್ಟದ ಕ್ರೀಡಾಪಟುವಾಗಿದ್ದ ಈತ ಸಾಕಷ್ಟು ಪುಸ್ತಕಗಳನ್ನು ಬರೆದು ಪ್ರಸಿದ್ದಿ ಹೊಂದುವ ಕನಸು ಕಂಡಿದ್ದ. ಆದರೆ ೨೦೦೪ ಮೇ ತಿಂಗಳಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಿರಿಬಾಬು ಎಂಬಾತನೊಂದಿಗೆ ಜಗಳ ನಡೆದಿದ್ದು ಗಿರಿಬಾಬು ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುತ್ತಾನೆ. ಈ ಪ್ರಕರಣ ನ್ಯಾಯಾಲಯ ಮೆಟ್ಟಲೇರಿ ಯಲ್ಲಪ್ಪ ೧೪ ವರ್ಷ ಸೆರೆವಾಸಕ್ಕೆ ಗುರಿಯಾಗಿದ್ದರು.

ಸೆರೆವಾಸಕ್ಕೆ ಗುರಿಯಾಗಿದ್ದ ಯಲ್ಲಪ್ಪ ಆರಂಭದಲ್ಲಿ ಎಲ್ಲಾ ಕೃದಿಗಳಂತೆ ಜಿಗುಪ್ಸೆಗೊಂಡಿದ್ದ. ಕೆಲ ದಿನಗಳ ನಂತರ ಶಿಕ್ಷಣದತ್ತ ಈತನ ಚಿತ್ತ ಹರಿಯಿತು ಜೈಲು ಅಧಿಕಾರಿಗಳ ಹಾಗೂ ಸ್ನೇಹಿತರ ಸಹಕಾರದಿಂದ ದೂರ ಶಿಕ್ಷಣದಲ್ಲಿ ಎಂ.ಎ ಪದವಿಯನ್ನು ಪಡೆದ.ಇಷ್ಟಕ್ಕೆ ಈತನ ವಿದ್ಯಾಭ್ಯಾಸ ಜರ್ನಿ ಸ್ಟಾಪ್ ಆಗಲಿಲ್ಲ ತನ್ನ ಸೆರವಾಸ ದುದ್ದಕ್ಕೂ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದ ಯಲ್ಲಪ್ಪ ನಾಲ್ಕು ಪದವಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.ಜೊತೆಗೆ ಯಲ್ಲಪ್ಪ ಸಾಕಷ್ಟು ಕೈದಿಗಳಿಗೆ ಪ್ರೇರಣೆಯಾಗಿದ್ದು ಈತನ ಪ್ರೇರಣೆಯಿಂದ ೬೭ ಕೈದಿಗಳು ಪದವಿ ಪಡೆದಿದ್ದಾರೆ. ಮಾತ್ರವಲ್ಲ ೨೦೦ ಜನರು ಯಲ್ಲಪ್ಪನ ಮಾರ್ಗದರ್ಶನದಲ್ಲಿ ಕಲಿಕೆ ನಡೆಸುತ್ತಿದ್ದಾರೆ.

ಒಟ್ಟಾರೆ ಜೀವನದಲ್ಲಿ ಸ್ವಲ್ಪ ತೊಡಕು ಉಂಟಾಯಿತೆಂದರೆ ಸಾಕು ಜೀವನವೆ ನಶಿಸಿಹೊಯಿತು ಎಂದು ಹಿಮ್ಮುಖ ತೋರುವ ಮಂದಿಗೆ ಯಲ್ಲಪ್ಪ ಮಾದರಿಯಾಗಿ ನಿಂತಿದ್ದಾನೆ. ಇನ್ನೂ ಈತನು ಪಿಎಚ್ ಡಿ ಮಾಡುವ ಕನಸು ಸಹ ಹೊಂದಿದ್ದು ಈತನ ಕನಸು ನನಸಾಗಲೆಂದು ನಾವು ಆಶಿಸೋಣ.