ಇಲ್ಲಿ ಒಂದು ರಾತ್ರಿ ಕಳೆಯೋಕೆ ಜಸ್ಟ್​ 70 ಲಕ್ಷ!ಫಿಲಿಪೈನ್ಸ್​​​ನ ಈ ರೆಸಾರ್ಟ್​ನಲ್ಲಿ ಅಂತಹದ್ದೇನಿದೆ ಗೊತ್ತಾ?!

ಜನರು ರಿಲ್ಯಾಕ್ಸ್​ ಆಗೋಕೆ ರೆಸಾರ್ಟ್​ಗಳ ಮೊರೆ ಹೋಗೋದು ಇತ್ತೀಚಿನ ದಿನಗಳಲ್ಲಿ ಕಾಮನ್​.  ರೆಸಾರ್ಟ್ ಗಳಲ್ಲಿ ಆರಾಂ ಆಗಿ ವಿಶ್ರಾಂತಿ ಪಡೆದು ರಿಲ್ಯಾಕ್ಸ್​ ಆಗೋ ಸ್ಕೆಚ್​​ನಲ್ಲಿರೋರು ಈ ರೆಸಾರ್ಟ್​ ನ ದರ ಕೇಳಿದ್ರೆ ರಿಲ್ಯಾಕ್ಸ್​ ಆಗೋ ಬದಲು ಶಾಕ್​ ಆಗೋದು ಗ್ಯಾರಂಟಿ. ಯಾಕೆ ಅಂದ್ರಾ ಇಲ್ಲಿದೆ ನೋಡಿ ಡಿಟೇಲ್ಸ್​.

ad

ದೂರದ ಫಿಲಿಪೈನ್ಸ್‌ನಲ್ಲೊಂದು ದ್ವೀಪವಿದೆ. ಅದು ಅಕ್ಷರಶಃ ಸಿನಿಮಾದಲ್ಲಿ  ತೋರಿಸುವಷ್ಟೇ ಐಷಾರಾಮಿಯಾಗಿ, ಸುಂದರವಾಗಿದೆ. ಆದರೆ ಅದರ ಬಾಡಿಗೆ ಕೇಳಿದ್ರೆ ನೀವು ಬೆವರಿಹೋಗ್ತಿರಾ. ಹೌದು ಈ ರೆಸಾರ್ಟ್ ನಲ್ಲಿ ಒಂದು ರಾತ್ರಿ ಕಳೆಯೋಕೆ ನೀವು ಬರೋಬ್ಬರಿ 70 ಲಕ್ಷ ರೂಪಾಯಿ ಪಾವತಿಸಬೇಕು.

ಹೌದು ಫಿಲಿಪೈನ್ಸ್ ನ ಬನ್ವಾ ಪ್ರೈವೆಟ್ ಐಲ್ಯಾಂಡ್ ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್. ಸುಮಾರು 15 ಎಕರೆ ಪ್ರದೇಶದಲ್ಲಿ ಹರಡಿರುವ ಈ ರೆಸಾರ್ಟಿನಲ್ಲಿ 6 ವಿಲ್ಲಾ ಮತ್ತು 12 ಗಾರ್ಡನ್ ಇವೆ. ಒಂದು ವಿಲ್ಲಾದಲ್ಲಿ 8 ಜನರು ನೆಲೆಸುವಂತ ವ್ಯವಸ್ಥೆ ಇದ್ದು, ಈ ವಿಲ್ಲಾದಲ್ಲಿ ಒಂದು ರಾತ್ರಿ ಕಳೆಯಲು ಒಂದು ಲಕ್ಷ ಡಾಲರ್!ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 70 ಲಕ್ಷ ರೂ.

ಎಲ್ಲಾ ವಿಲ್ಲಾದ ಮಹಡಿ ಮೇಲೂ ಇನ್ಫಿನಿಟಿ ಪೂಲ್ ಇದೆ.ರೆಸಾರ್ಟ್‌ ಸುತ್ತಲೂ ನೀರಿನಿಂದ ತುಂಬಿರುತ್ತದೆ. ಆದುದರಿಂದ ಅಲ್ಲಿಗೆ ತಲುಪಬೇಕಾದರೆ ಹೆಲಿಕಾಪ್ಟರಿನಲ್ಲೇ ಹೋಗಬೇಕು. ಇಲ್ಲಿನ ಊಟವೂ ಕೂಡ ತುಂಬಾ ದುಬಾರಿಯಾಗಿದೆ.

ಇಲ್ಲಿನ ತಾಪಮಾನ ಮಾತ್ರ ಯಾವತ್ತೂ 30 ಡಿಗ್ರಿಗಿಂತ ಕಡಿಮೆ ಇರೋಲ್ಲ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿಗಳು ಹಾಗೂ ಫ್ರೆಶ್ ಸೀ ಫುಡ್‌ಗಳನ್ನೇ ಬಳಸುತ್ತಾರೆ. ಇಲ್ಲಿ ಆ್ಯಕ್ಟಿವಿಟಿಗಾಗಿ ಸ್ಕೂಬಾ ಡೈವಿಂಗ್, ಸ್ನೋ ಕಿಲ್ಲಿಂಗ್, ಜೆಟ್ ಸ್ಕೈಯಿಂಗ್ ಮೊದಲಾದ ಸಾಹಸಮಯ ವ್ಯವಸ್ಥೆಗಳಿವೆ. ಇದರ ಜೊತೆಗೆ ಡೆಸರ್ಟ್ ಸ್ಟೈಲ್ ನ ಗಾಲ್ಫ್ ಕೂಡ ಆಡಬಹುದು.

ಇಷ್ಟೊಂದು ದುಬಾರಿಯಾಗಿದ್ದರೂ ಕೂಡ ಈ ರೆಸಾರ್ಟ್​ಗೆ ಯಾವತ್ತೂ ಪ್ರವಾಸಿಗರ ಕೊರತೆ ಕಾಡಿದ್ದೇ ಇಲ್ವಂತೆ. ವಿಶ್ವದ ನಾನಾಮೂಲೆಗಳಿಂದ ಜನರು ಇಲ್ಲೊಂದು ರಾತ್ರಿ ಕಳೆಯೋಕೆ ಬರ್ತಾರಂತೆ.