ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಪತ್ತೆ !! ಅಭಿಮಾನಿಗಳಲ್ಲಿ ಸಂತಸ !! ಡ್ರೋಣ್ ಕ್ಯಾಮಾರದಲ್ಲಿ ಸೆರೆ !

ಸ್ಪೈಡರ್ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿ ರಾಜ್ ಜೋಗ ಜಲಪಾತದಲ್ಲಿ ಕಾಣೆಯಾಗಿದ್ದರು. ಇದೀಗ ಜ್ಯೋತಿರಾಜ್ ಪತ್ತೆಯಾಗಿದ್ದಾರೆ.

ಜಲಪಾತಕ್ಕೆ ಧುಮಿಕಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗುವ ಬೆಂಗಳೂರು ಮೂಲದ ಯುವಕನ ಶವ ಹುಡುಕಾಟಕ್ಕೆ ಜೋಗ ಜಲಪಾತಕ್ಕಿಳಿದಿದ್ದ ಜ್ಯೋತಿ ರಾಜ್ ಕಣ್ಮರೆಯಾಗಿದ್ದರು. ಮೂರು ದಿನದ ಹಿಂದೆ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ವಾಸಿಸುವ ಮಂಜುನಾಥ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಬೈಕ್ ಜೋಗದ ಬಳಿ ಪತ್ತೆಯಾಗಿತ್ತು. ಪ್ರಕರಣದ ಸಂಬಂಧ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಜುನಾಥ್ ಕುಟುಂಬ ಸದಸ್ಯರು ಮೃತದೇಹ ಪತ್ತೆ ಮಾಡಲು ಚಿತ್ರದುರ್ಗದಿಂದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್​ನನ್ನು ಕರೆಸಿದ್ದರು.

ಆತ ಬೆಳಿಗ್ಗೆ ಜೋಗದ ಪ್ರಪಾತಕ್ಕೆ ಇಳಿದಿದ್ದನು. ಆದ್ರೆ ನಿನ್ನೆ ಸಂಜೆಯಾದರೂ ಕೋತಿರಾಜ್ ಮೇಲೆ ಬರದೆ ಇದ್ದಾಗ ಆತಂಕಗೊಂಡ ಜನರು ಹುಡುಕಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಏನು ಪ್ರಯೋಜನವಾಗಿರಲಿಲ್ಲ. ಇಂದು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಜ್ಯೋತಿರಾಜ್ ಪ್ರಾಣಾಪಾಯದಿಂದ ಪಾರಾಗಿ ಬರುವಂತೆ ಭಾರೀ ಸಂಖ್ಯೆಯ ಜನ ಹಾರೈಸುತ್ತಿದ್ದರು. ಹೆಬ್ಬಾವುಗಳಿಂದ ತುಂಬಿರುವ ರಾಜಾಫಾಲ್ಸ್ ಪ್ರದೇಶದಲ್ಲಿ ಜ್ಯೋತಿರಾಜ್ ಅಪಾಯಕ್ಕೀಡಾಗಿದ್ದಾರೆ ಎನ್ನಲಾಗಿತ್ತು. ಆದರೆ ಡ್ರೋನ್ ಕ್ಯಾಮಾರಾದಲ್ಲಿ ಜ್ಯೋತಿರಾಜ್ ಸೆರೆಯಾಗಿದ್ದು, ನಿಶಕ್ತಿಯಿಂದ ಬಂಡೆಯ ಮೇಲೆ ಕುಳಿತುಕೊಂಡಿದ್ದಾರೆ. ನಿನ್ನೆಯಿಂದ ಆಹಾರವಿಲ್ಲದೆ ಬಳಲುತ್ತಿದ್ದ ಜ್ಯೋತಿರಾಜ್ ನಿಶಕ್ತಿಗೊಳಗಾಗಿದ್ದಾರೆ.